ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮೆಡಿಕಲ್‍ ಅಸೋಸಿಯೇಶನ್‍ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ | ಸರಕಾರದ ಗಮನ ಸೆಳೆಯುವಂತೆ ಆಗ್ರಹ

ಪುತ್ತೂರು: ಯಶಸ್ವಿನಿ ಯೋಜನೆಯಲ್ಲಿ ಚಿಕಿತ್ಸಾ ದರ ಪರಿಷ್ಕರಿಸುವ ಸಹಿತ ವಿವಿಧ ಬೇಡಿಕೆಗಳನ್ನು ಸರಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಧಾರವನ್ನು ಮೆಡಿಕಲ್‍ ಅಸೋಸಿಯೇಶನ್‍ ಕೈಗೊಂಡಿದೆ ಎಂದು ಅಸೋಸಿಯೇಶನ್‍ ಅಧ್ಯಕ್ಷ ಡಾ.ಶ್ರೀಪತಿ ರಾವ್‍ ತಿಳಿಸಿದ್ದಾರೆ..

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಎಲ್ಲಾ ಹಣವನ್ನು ಕೂಡಲೇ ಸಂದಾಯ ಮಾಡಬೇಕು, ರೋಗಿಗಳು ಆಸ್ಪತ್ರೆಗೆ ಸೇರುವಾಗ ಇರುವ ನಿಬಂಧನೆಗಳನ್ನು ಸಡಿಲಿಕರಣಗೊಳಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ಪುತ್ತೂರಿನ ಆಸ್ಪತ್ರೆಗಳಲ್ಲಿ ಸರಕಾರಿ ಯೋಜನೆಗಳಾದ ಇಎಸ್‌ಐ, ಯಶಸ್ವಿನಿ ಸಹಿತ ಹಲವಾರು ಯೋಜನೆಗಳನ್ನು ಉತ್ತಮವಾಗಿ ನಿಭಾಯಿಸುತ್ತಿವೆ. ಆದರೆ ಇದೀಗ ಸ್ಥಗಿತಗೊಳಿಸಿದ ಯಶಸ್ವಿ ಯೋಜನೆ ಮರು ಪ್ರಾಂಭಿಸುವಾಗ ಹಲವಾರು ನಿಬಂಧನೆ ಮತ್ತು ರೋಗಿಗಳ ಚಿಕಿತ್ಸಾ ದರವನ್ನು ಕಡಿಮೆ ಗೊಳಿಸಿದ್ದರಿಂದ ನ್ಯಾಯುತವಾಗಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಕೇಂದ್ರ ಸಿ.ಜಿ.ಎಸ್.ಹೆಚ್.ಎಸ್ ನಂತೆ 2014ರ ಇಸವಿಯ ಚಿಕಿತ್ಸಾ ದರವೇ ಈಗಲೂ ಚಾಲ್ತಿಯಲ್ಲಿದೆ. 2014ರ ಚಿಕಿತ್ಸಾ ದರ 2017 ಮತ್ತು 2020ರಲ್ಲಿ ಹಾಗೂ 2023ರಲ್ಲಾದರೂ ಪರಿಷ್ಕರಣೆ ಆಗಬೇಕಾಗಿತ್ತು. ಆದರೆ ಅದನ್ನು ಮಾಡಿಲ್ಲ. ಈ ಹಿಂದೆ ಇದ್ದ ಯಶಸ್ವಿನಿ ಯೋಜನೆ ಉತ್ತಮವಾಗಿತ್ತು. ಆದರೆ ಅದರಲ್ಲೂ ಹಲವು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಈ ನಿಟ್ಟಿನಲ್ಲಿ ಯಸ್ವಿನಿ ಯೋಜನೆಗೆ ಬಹುತೇಕ ಆಸ್ಪತ್ರೆಗೆಳು ಸೇರ್ಪಡೆಗೊಂಡಿಲ್ಲ.





























 
 

ಇತ್ತೀಚೆಗೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭ ಬಂದಿರುವ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ನಮಗೆ ನೋಟೀಸ್ ನೀಡಿದ್ದಾರೆ. ಈ ನೋಟೀಸ್‌ಗೆ ಸಂಬಂಧಿಸಿ ನಾವು ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಲ್ಲಿ ಸೇರಬೇಕಾದರೆ ನಮ್ಮ ಕೆಲವೊಂದು ಬೇಡಿಕೆಗಳಿವೆ. ಅದನ್ನು ಈಡೇರಿಸವಂತೆ ಮನವಿ ಮಾಡಲಿದ್ದೇವೆ. ಖಾಸಗಿ ಕೊಠಡಿಗಳಿಗೂ ರೋಗಿಗಳಿಗೆ ಅನುಮತಿ ನೀಡಬೇಕೆಂದು ಮನವಿ ನೀಡಲಿದ್ದೇವೆ ಎಂದು ತಿಳಿಸಿದ ಅವರು, ಒಟ್ಟಿನಲ್ಲಿ ಉಳುವ ರೈತರ ಹೈನುಗಾರರ ಆರೋಗ್ಯದ ಮೇಲೆ ಕಾಳಜಿ ವಹಿಸಿ ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗುವಂತೆ ಮಾಡುವ ಜವಾಬ್ದಾರಿ ಸರಕಾರಕ್ಕೂ ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಇದೆಯೆಂದು ತಿಳಿದು ಸರಕಾರ ಉತ್ತಮ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ ಎಂದರು.

ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಡಿ ಪುತ್ತೂರಿನ ನಾಲ್ಕು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಹಿಂದೆ ಸರಕಾರದಿಂದ ಯೋಜನೆ ಚಾಲ್ತಿಯಲ್ಲಿತ್ತು. ಬಳಿಕ ಅದನ್ನು ಇನ್‌ಶ್ಯುರೆನ್ಸ್ ಕಂಪೆನಿಗೆ ವರ್ಗಾಯಿಸಲಾಯಿತು. ಈ ಸಂದರ್ಭ ಆಸ್ಪತ್ರೆಗಳಿಗೆ ಚಿಕಿತ್ಸಾ ದರ ಪಾವತಿ ಬಾಕಿಯಾಗುತ್ತಿತ್ತು. ಈ ಕುರಿತು ಹಲವು ಬಾರಿ ಪತ್ರ ಬರೆಯಲಾಗಿದೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಒಟ್ಟು ನಾಲ್ಕು ಆಸ್ಪತ್ರೆಗೆಳಿಗೆ ಸುಮಾರು ರೂ. 22ಲಕ್ಷ ಬಾಕಿ ಇದೆ. ಎಂದು ಅಸೋಸಿಯೇಶನ್‍ ಉಪಾಧ್ಯಕ್ಷ ಡಾ.ಭಾಸ್ಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ. ಎಸ್.ಎಸ್ ಜೋಶಿ, ಕೋಶಾಧಿಕಾರಿ ಡಾ. ಅಶೋಕ್ ಪಡಿವಾಳ್, ಸದಸ್ಯರಾದ ಡಾ. ಜೆ.ಸಿ.ಅಡಿಗ, ಡಾ. ರವೀಂದ್ರ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top