ಪುತ್ತೂರು : ನಗರಸಭೆ ವಾರ್ಡ್ ನಂಬ್ರ 17-18 ರಲ್ಲಿ ಸ್ವಚ್ಛತಾ ಮಾಹಿತಿ ಕಾರ್ಯಗಾರ, ಬಟ್ಟೆ ಚೀಲ ವಿತರಣೆ ಮತ್ತು ಬಪ್ಪಳಿಗೆ ಅಂಗನವಾಡಿ ಸುತ್ತ ಮುತ್ತ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮ ವಾರ್ಡ್ ನಂಬ್ರ -17 ರ ಸದಸ್ಯ ಭಾಮಿ ಅಶೋಕ್ ಶೆಣೈ, ವಾರ್ಡ್ ನಂಬ್ರ -18 ರ ಸದಸ್ಯೆ ಯಶೋಧ ಹರೀಶ್ ಪೂಜಾರಿ ಅವರ ನೇತೃತ್ವದಲ್ಲಿ ನಡೆಯಿತು. ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಹಾಗೂ ಸಾಹಸ್ ಎನ್.ಜಿ.ಓ. ಸಂಸ್ಥೆಯ ಸಿದ್ದಪ್ಪ ಒಡೆಯರ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸುಮಿತ್ರ, ಆಶಾ ಕಾರ್ಯಕರ್ತೆ ಚಂದ್ರಾವತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಗಿರಿಜಾ, ಸಂಘ ಸಂಸ್ಥೆಯ ಸದಸ್ಯರು, ನಗರಸಭೆಯ ಸಿಬ್ಬಂದಿಗಳಾದ ಜಯಲಕ್ಷ್ಮಿ, ರಶ್ಮಿತಾ ಭಾಗವಹಿಸಿದ್ದರು.