ಸುಳ್ಯ: ಪಾನ್ ಬೀಡ ಅಂಗಡಿಯೊಂದರಲ್ಲಿ ಓರ್ವ ವ್ಯಕ್ತಿ ಮಟ್ಕಾ, ಜೂಜಾಟ ಆಡುತ್ತಿದ್ದ ವೇಳೆ ಸುಳ್ಯ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪಿಯನ್ನು ಕಲ್ಲುಗುಂಡಿ ಸಂಪಾಜೆ ಗ್ರಾಮ ಸುಳ್ಯ ನಿವಾಸಿ ಮಹಮ್ಮದ್ ಮುಸ್ತಕ್ ಎನ್ನಲಾಗಿದೆ.
ಕಲ್ಲುಗುಂಡಿ ಪೇಟೆಯ ಚರ್ಚ್ ಬಳಿ ಸಮೀಪ ಹೊಟೇಲ್ ಬದಿಯಲ್ಲಿರುವ ಪಾನ್ ಬೀಡ ಅಂಗಡಿಯೊಂದರ ವ್ಯಕ್ತಿ ಜನರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜೂಜಾಟ ನಡೆಸುತಿರುವ ಬಗ್ಗೆ ಮಾಹಿತಿ ಮೂಲಕ ಜ. 20 ರಂದು ರಾತ್ರಿ ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಸಂತೋಷ್ ಬಿ ಪಿ ರವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಪಾನ್ ಬೀಡ ಅಂಗಡಿಯಲ್ಲಿದ್ದ ವ್ಯಕ್ತಿಯನ್ನು ಕೂಲಂಕೂಷವಾಗಿ ವಿಚಾರಿಸಿದಾಗ ತಾನು ಗಿರಾಕಿಗಳಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂದ್ದಾನೆ.
ಬಳಿಕ ತಪಾಸಣೆ ನಡೆಸಿ, ಆರೋಪಿಯ ಬಳಿಯಿದ್ದ ಮಟ್ಕಾ ಜೂಜಾಟ ನಡೆಸಿ ಸಂಗ್ರಹಿಸಿದ ರೂ 1650/- ನಗದು, ಮಟ್ಕಾ ಆಡಲು ಬಳಸಿದ ಪುಸ್ತಕ-01 ಪುಸ್ತಕದಲ್ಲಿ ಅಂಕೆ ಸಂಖ್ಯೆಗಳನ್ನು ಬರೆಯಲು ಬಳಸಿರುವ ಪೆನ್-01 ನ್ನು ಸ್ವಾದೀನಪಡಿಸಿಕೊಂಡು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2025 ಕಲಂ: 78 (3) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.