ಪುತ್ತೂರು : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬ್ರದ ಶೇಖಮಲೆಯಲ್ಲಿ ನಡೆದಿದೆ.
ಶೇಖಮಲೆ ಚೆಕ್ಕನಡ್ಕ ದರ್ಖಾಸ್ ನಿವಾಸಿ ದೀಪಕ್ ಎಂಬವರ ಪತ್ನಿ ಲಲಿತ ರೈ (37) ಮೃತಪಟ್ಟವರು.
ಮೃತರು ಒರ್ವ ಪುತ್ರನನ್ನು ಆಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕದಳದವರು ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.