ಕೆದಿಲ: ಕಾರು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪೆರಮುಗೇರಿನ ಸತ್ತಿಕಲ್ ಎಂಬಲ್ಲಿ ನಡೆದಿದೆ.
ಕೆದಿಲ ಗ್ರಾಮದ ಕುದ್ಮಾರ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಪೈಂಟರ್ ಉದ್ಯೋಗಿ ಉಸ್ಮಾನ್ (24) ಅಪಘಾತದಿಂದ ಮೃತಪಟ್ಟವರು.
ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಮೊಬೈಲಲ್ಲಿ ಮಾತನಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದೆ. ಗಂಭೀರ ಗಾಯಗೊಂಡಿದ್ದ ಉಸ್ಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.