ಕಡಬ : ಮನೆಯೊಳಗೆ ಯಾರು ಇರದಾಗ ನುಗ್ಗಿದ ಕಳ್ಳರು ಚಿನ್ನಾಭರಣಗಳ ಜೊತೆಗೆ ನಗದು ಕಳವು ಮಾಡಿದ ಘಟನೆ ನೆಕ್ಕಿಲಾಡಿ ಗ್ರಾಮ ಕಡಬ ತಾಲೂಕು ಮರ್ಧಾಳ ಎಂಬಲ್ಲಿ ನಡೆದಿದೆ.
ಈ ಘಟನೆ ನೆಕ್ಕಿಲಾಡಿ ಗ್ರಾಮ ಕಡಬ ತಾಲೂಕು ಮರ್ಧಾಳ ಕುರಿಯ ಕೋಸ್ ಜೇಮ್ಸ್ ಎಂಬವರ ಮನೆಯಲ್ಲಿ ನಡೆದಿದೆ.
ಕೋಸ್ ಜೇಮ್ಸ್ ದೂರಿನ ಪ್ರಕಾರ ಜ. 12 ರಂದು ಪತ್ನಿ ಹಾಗೂ ಮಗನೊಂದಿಗೆ ಪ್ರಾರ್ಥನೆ ಮಾಡಲು ಬೆಳಿಗ್ಗೆ ಮನೆಗೆ ಬೀಗ ಹಾಕಿ ಹೋಗಿದ್ದರಿಂದ ಪ್ರಾರ್ಥನೆ ಮುಗಿಸಿ ಸಾಯಂಕಾಲ ಅವರ ಮಗ ಜೋಯಲ್ ವಾಪಾಸು ಮನೆಗೆ ಬಂದು ಮನೆಯ ಎದುರು ಬಾಗಿಲಿನ ಬೀಗ ತೆಗೆದು ಒಳಗೆ ಹೋದಾಗ, ಮನೆಯ ಒಳಗಡೆ ಬೆಡ್ ರೂಮ್ ನಲ್ಲಿದ್ದ ಗೋಡ್ರೆಜ್ ಬಾಗಿಲು ತೆರೆದಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ ಕುರಿಯ ಕೋಸ್‌ರವರಿಗೆ ಹಾಗೂ ಪತ್ನಿಗೆ ದೂರವಾಣಿ ಮುಖೇನ ಮಗ ಜೋಯಲ್ ವಿಷಯ ತಿಳಿಸಿರುತ್ತಾರೆ.
ಕೂಡಲೇ ಮನೆಗೆ ಬಂದು ಪರಿಶೀಲಿಸಿದಾಗ ಮನೆಯ ಹಿಂದಿನ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿ ಕಳ್ಳರು ಗೋಡ್ರೆಜ್ ಒಳಗೆ ಇಟ್ಟಿದ್ದ ಒಟ್ಟು 76 ಗ್ರಾಂ ಚಿನ್ನಾಭರಣಗಳು ಸಹಿತ ನಗದು ರೂ 1,00,000/- ಕದ್ದು ಪರಾರಿಯಾಗಿರುವ ಶಂಕೆ ತಿಳಿದು ಬಂದಿದೆ. ಕಳುವಾಗಿರುವ ಚಿನ್ನದ ಆಭರಣಗಳ ಮೌಲ್ಯ ಅಂದಾಜು ರೂ 2,66,000/- ಹಾಗೂ ನಗದು 1,00,000/- ಆಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ : 02/2025 ಕಲಂ:331(3),305, BNS ರಂತೆ ಪ್ರಕರಣ ದಾಖಲಾಗಿರುತ್ತದೆ.