ಪುತ್ತೂರು: ಆಟೋ ಚಾಲಕರು ಮತ್ತು ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣುಗಳಿದ್ದಂತೆ. ಅವರು ಇಲ್ಲದೇ ಇರುವ ಅದು ಪರಿಪೂರ್ಣತೆಯನ್ನು ಹೊಂದಲು ಸಾಧ್ಯವೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ಶಾಸಕರ ಅನುದಾನದಿಂದ ನಿರ್ಮಾಣವಾದ ನೂತನ ರಿಕ್ಷಾ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ಆಟೋ ಚಾಲಕರು ಸಂಕಷ್ಟದಲ್ಲಿ ನೆರವಿಗೆ ದಾವಿಸುವ ಆಪತ್ಬಾಂದವರಾದರೆ, ಸ್ವಚ್ಚತಾ ಕಾರ್ಮಿಕರು ಜನರ ಆರೋಗ್ಯ ಕಾಪಾಡುವ ರಕ್ಷಕರು. ಈ ಕಾರಣಕ್ಕೆ ಇವರನ್ನು ಸಮಾಜ ಯಾವತ್ತೂ ಅಗೌರವದಿಂದ ಕಾಣಬಾರದು. ಬೆಳಿಗ್ಗೆಯಿಂದ ರಾತ್ರಿ ತನಕ ತನ್ನ ಕುಟುಂಬವನ್ನು ಸಲಹುವ ಉದ್ದೇಶದಿಂದ ಬಿಸಿಲು ಮಳಗೆ ದುಡಿಯುತ್ತಿರುವ ಆಟೋ ಚಾಲಕರಿಗೆ ನೆರಳಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ಇದ್ದ ಕಡೆ ತಂಗುದಾನ ನಿರ್ಮಾಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ತಂಗುದಾನದ ಬಳಿ ಶೌಚಾಲಯವನ್ನು ನಿರ್ಮಾಣ ಮಾಡುವ ಉದ್ದೇಶವಿರುವುದಾಗಿ ಶಾಸಕರು ಹೇಳಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭಾ, ಗ್ರಾಪಂ ಉಪಾಧ್ಯಕ್ಷ ಮಹೇಶ್, ಸದಸ್ಯರಾದ ಮೊಯಿದುಕುಂಞಿ ಕೋನಡ್ಕ, ಮಹಾಲಿಂಗ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಅಬೂಬಕ್ಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪಸ್ರಸಾದ್ ಪಾಣಾಜೆ, ಐತಪ್ಪ ಪೇರಲ್ತಡ್ಕ, ನಾರಾಯಣ ಹೊಳ್ಳ, ಗುತ್ತಿಗೆದಾರ ಸಿಯಾನ್ ದರ್ಬೆ, ಶ್ರಮಜೀವಿ ಆಟೋ ಚಾಲಕ ಮಾಲಕ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಚೆಲ್ಯಡ್ಕ ಸ್ವಾಗತಿಸಿ, ಸಿದ್ದಿಕ್ ತಂಬುತ್ತಡ್ಕ ವಂದಿಸಿದರು.