ಪುತ್ತೂರು: ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿ ನಡೆದ ರಾಜ್ಯಮಟ್ಟದ ತ್ರೋಬಾಲ್ ಪಂದ್ಯಾಟದ 17 ರ ವಯೋಮಾನದಲ್ಲಿ ಪುತ್ತೂರಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದ್ವೀತಿಯ ಸ್ಥಾನ ಪಡೆದು ಶಾಲೆಗೆ ಹಿರಿಮೆ ತಂದಿರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಸನ್ಮಾನ ಸಮಾರಂಭ ಬುಧವಾರ ಶಾಲಾ ಆಡಿಟೋರಿಯಂನಲ್ಲಿ ನಡೆಯಿತು.
8ನೇ ತರಗತಿಯ ಹನಾನಫೀಸ, 9ನೇ ತರಗತಿಯ ವೈಗಾ ಎಂ., ಫಾತಿಮರಿಧಾ, ನಿಹಾನಿ ಮುತ್ಲಾಜೆ, ನಿಹಾರಿಕಾ, ಪೂರ್ವಿಕಾ, 10ನೇ ತರಗತಿಯ ವಿದ್ಯಾರ್ಥಿಗಳಾದ ರೋಶ್ನಿ ಆ್ಯನೇಟ್ ಫೆರ್ನಾಂಡಿಸ್, ಪ್ರಿಯಾಂಕ ಪಿ. ಹಾಗೂ ಹಿತಾಶ್ರೀ ಜಿ. ಗೌಡ, ದೈಹಿಕ ಶಿಕ್ಷಕರಾದ ಹರೀಶ್ ಅವರನ್ನು ಶಾಲಾ ಸಂಚಾಲಕರಾದ ಭಗಿನಿ ಪ್ರಶಾಂತಿ ಶಾಲು ಹಾಗೂ ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಬಿ.ಎಸ್., ಶಾಲಾ ರಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷೆ ಸುನೀತಾ ಪಿರೇರಾ, ಉಪಾಧ್ಯಕ್ಷ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಪವಿತ್ರಾ ವಿ. ಸ್ವಾಗತಿಸಿ, ಶಿಕ್ಷಕಿ ಸೌಮ್ಯಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು.