ಮಂಗಳೂರು : ಮಂಗಳೂರು ತಾಲೂಕಿನ ಬಾಳ ಗ್ರಾಮದ ಟ್ಯಾಂಕರ್ ಯಾರ್ಡಿನಲ್ಲಿರುವ ಟ್ಯಾಂಕರುಗಳಿಂದ ಮಾಲಕರಿಗೆ ತಿಳಿಯದೇ ಡೀಸೆಲ್ನ್ನು ಕಳವು ಮಾಡಿ ದಾಸ್ತಾನು ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂದಿಸಿ ಪತ್ತೆ ಹಚ್ಚಿರುವ ಮಂಗಳೂರು ನಗರ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕುಳಾಯಿಗುಡ್ಡೆಯ ಸಂತೋಷ್ (42), ಕಾಟಿಪಳ್ಳದ ಐರನ್ ರಿತೇಶ್ ಮಿನೇಜ್ (36), ಟ್ಯಾಂಕರ್ ಚಾಲಕ ಕಡಿರುದ್ಯಾವರ, ನಾರಾಯಣ ( 23 ) ಮತ್ತು ಹೆಜಮಾಡಿಯ ರವಿ ಜನಾಂದ್ರ ಪುತ್ರನ್ (59)ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳು ಶೇಖರಿಸಿಟ್ಟಿದ್ದ 1685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್, 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಡೀಸೇಲ್ ಬೆಲೆ 2,02,000 ರೂ, ಮತ್ತು ಪೆಟ್ರೋಲ್ನ ಮೌಲ್ಯ 1,52,000 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ರವಿವಾರ ನಿಖರ ಮಾಹಿತಿಯಂತೆ ದಾಳಿ ನಡೆಸಿದಾಗ ಆರೋಪಿಗಳು ಟ್ಯಾಂಕರ್ನಿಂದ ಡೀಸೆಲ್ ಮತ್ತು ಪೆಟ್ರೋಲ್ ಕದಿಯುವ ಪ್ರಕರಣ ತಿಳಿದು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ