ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ವಿವೇಕ ಜಯಂತಿ ಆಚರಣೆ | ಗುರುವಿನಿಂದ ಪಡೆದ ಉತ್ಕೃಷ್ಟ ವಿಚಾರಗಳ ಚೈತನ್ಯರೂಪ ಶಿಷ್ಯರು : ಡಾ.ಜಿ.ಬಿ. ಹರೀಶ್

ಪುತ್ತೂರು : ಶಿಷ್ಯರನ್ನು ಉತ್ತಮ ವಿಚಾರಗಳಿಂದ ರೂಪಿಸಬೇಕೆಂಬ ಹಂಬಲ ಗುರುವಿಗೆ ಇರುತ್ತದೆ. ಶಿಷ್ಯರಾದವರು ಸಮಾಜಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆ ಗುರುವಿನ ಆಧ್ಯಾತ್ಮಿಕ ಗರ್ಭದಿಂದ ಪ್ರಸೂತಿ ಆದಂತೆ. ರಾಮಕೃಷ್ಣ ಪರಮಹಂಸರ ನೆರಳಿನಲ್ಲಿ ವಿವೇಕಾನಂದರು ಜಗದಗಲ ಹೆಸರಾಗುವಂತೆ ಬೆಳೆದರು. ಸ್ವದೇಶಿಯತೆಯನ್ನು ಜಾಗೃತಗೊಳಿಸಿ ಎಲ್ಲರನ್ನೂ ಒಳಿತಿನತ್ತ ಸಾಗುವಂತೆ ಪ್ರೇರಣೆಯಾಗಿದ್ದವರು ವಿವೇಕಾನಂದರು. ಸದಾ ಭಾರತದ ಒಳಿತನ್ನು ಬಯಸುತ್ತಿದ್ದ ಸ್ವಾಮಿ ವಿವೇಕಾನಂದರು ಅವರ ಬಳಿ ಬಂದವರನ್ನು ದೇಶಭಕ್ತರನ್ನಾಗಿ ಪರಿವರ್ತನೆ ಮಾಡುತ್ತಿದ್ದರು. ಹಿಂದುತ್ವಕ್ಕೆ ಹೊಸ ದಿಕ್ಕು ಇವರಿಂದ ದೊರಕಿತು ಎಂದು ಬೆಂಗಳೂರಿನ ವಂದೇಮಾತರಂ ಪಾಠ ಶಾಲೆಯ ಸಂಸ್ಥಾಪಕ ಹಾಗೂ ಸಂಶೋಧಕ ಡಾ. ಜಿ.ಬಿ ಹರೀಶ್ ಹೇಳಿದರು.

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘಗಳ ಆಶ್ರಯದಲ್ಲಿ ‘ಪ್ರಜ್ಞೆಯೊಂದಿಗೆ ಪ್ರಗತಿ, ವಿಕಸಿತ ಭಾರತಕ್ಕಾಗಿ’ಎಂಬ ಪರಿಕಲ್ಪನೆಯೊಂದಿಗೆ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರು ಜಗತ್ತಿನ ಆಸ್ತಿ. ನಮ್ಮ ಪರಂಪರೆಯ ಬಗ್ಗೆ ಅರಿವು ಮೂಡಿಸಿದ ಪ್ರೇರಣದಾಯಿ. ಸಮಾಜದಲ್ಲಿ ಪರಿವರ್ತನೆ ಸಾಧಿಸುವತ್ತಯುವಶಕ್ತಿ ಮುಂದೆ ಹೆಜ್ಜೆಯನ್ನಿಡಬೇಕು. ನಮ್ಮ ದೇಶದ ಸ್ಪಷ್ಟ ಕಲ್ಪನೆ ಮತ್ತುಆತ್ಮವಿಶ್ವಾಸದ ಗುಣ ಅವರಲ್ಲಿತ್ತು. ನಾವು ಸಮಾಜಕ್ಕಾಗಿ ಬದುಕಬೇಕು ಎಂಬುದನ್ನು ಸ್ವಾಮಿ ವಿವೇಕಾನಂದರು ತಿಳಿಸಿಕೊಟ್ಟರು ಎಂದರು.































 
 

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ವೆಬ್‌ಸೈಟ್‌ಲೋಕಾರ್ಪಣೆಗೊಂಡಿತು.

ಈ ಸಂದರ್ಭದಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ವಿಕಸಿತ ಭಾರತ ಪರಿಕಲ್ಪನೆಗೆ ಪೂರಕವಾಗಿ ಸಮಾಜಮುಖಿ ಹಾಗೂ ಹೊಸ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ತಯಾರಿಸಿದ ವಿವಿಧರೀತಿಯ ಪ್ರಾಜೆಕ್ಟ್ ಗಳ ಅನಾವರಣ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು. ವಿವೇಕಾನಂದಶಿ ಶುಮಂದಿರದ ವಿದ್ಯಾರ್ಥಿಗಳು ವಿವೇಕವಾಣಿಯನ್ನು ಪ್ರಸ್ತುತಪಡಿಸಿದರು.

ವಿವೇಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ  ವಿವಿಧ ಸಂಸ್ಥೆಗಳಲ್ಲಿ ಆಯೋಜಿಸಿದ  ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್‍ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು, ನಿರ್ದೆಶಕರು, ಸದಸ್ಯರು, ಪ್ರಾಂಶುಪಾರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಸೇರಿ ಸುಮಾರು ಎಂಟು ಸಾವಿರ ಮಂದಿ ಭಾಗವಹಿಸಿದರು.

ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂಕೃಷ್ಣ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಶ್ರುತಿ ಕಾಯಕ್ರಮ ನಿರೂಪಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ. ಸುಧಾರಾವ್ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top