ಕಬಕ: ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಕಬಕದಲ್ಲಿ ಇಂದು ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿದ್ದು, ಉರಿಮಜಲು ಬಳಿ ಕಬಕ-ವಿಟ್ಲ ರಸ್ತೆಯಲ್ಲಿನ ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಸೇರಿದ ಪಿಕಪ್ ವಾಹನದಲ್ಲಿ ಕಬಕದಿಂದ ಹಿಂಬಾಲಿಸಿಕೊಂಡು ಬಂದು ಉರಿಮಜಲು ಎಂಬಲ್ಲಿ ಕೆಎಸ್‌ಆರ್‌ಟಿಸಿ ಚಾಲಕ-ನಿರ್ವಾಹಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪ್ರಯಾಣಿಕರ ಮುಂದೆಯೇ ಬಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಸೈಡ್ ಕೊಡಲಿಲ್ಲ ಎಂಬ ವಿಚಾರಕ್ಕೆ ಬಸ್ ಅಡ್ಡಗಟ್ಟಿ ಡ್ರೈವರ್‌ಗೆ ಹಲ್ಲೆ ಮಾಡಿದ್ದಾರೆ. ಬಸ್ ಕಂಡಕ್ಟರ್‌ಗೆ ಹಲ್ಲೆ ಮಾಡುವುದನ್ನು ವೀಡಿಯೋ ಮಾಡಿದಾಗ ಶಬರಿಮಲೆ ಮಾಲೆ ಹಾಕಿದ ಸ್ವಾಮಿಗೂ ಹಲ್ಲೆ ಮಾಡಿದ್ದಾರೆ ಎಂದು ಸಾರ್ವಜನಿಕರಿಂದ ತಿಳಿದು ಬಂದಿದೆ.
. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ