ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಶ್ರೀ ಬ್ರಹ್ಮ ಆದಿಮೊಗೇರ್ಕಳ, ಶ್ರೀ ಚಾಮುಂಡೇಶ್ವರೀ ಅಮ್ಮನವರ ಸೇವಾ ಸಮಿತಿ ವತಿಯಿಂದ ಮಾ.22 ಹಾಗೂ 23 ರಂದು ನಡೆಯುವ 5ನೇ ವರ್ಷದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಕರ ಸಂಕ್ರಮಣ ದಿನವಾದ ಮಂಗಳವಾರ (ಇಂದು) ಶ್ರೀ ಕೊರಗಜ್ಜನ ಸನ್ನಿಧಿಯಲ್ಲಿ ಬಿಡುಗಡೆಗೊಂಡಿತು.
ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ನೇಮೋತ್ಸವ ಶ್ರೀ ಬ್ರಹ್ಮ ಆದಿಮೊಗೇರ್ಕಳ, ಶ್ರೀ ಚಾಮುಂಡೇಶ್ವರೀ ಅಮ್ಮ, ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಲಿದೆ.
ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ನೆಕ್ಕರೆ, ಅಧ್ಯಕ್ಷ ರವಿ ಮುಕ್ವೆ ಬದಿನಾರುಕಟ್ಟೆ, ಶ್ರೀ ದೈವಸ್ಥಾನದ ಅನುವಂಶಿಕ ಮೊಕ್ತೇಸರ ಬಾಬು ಎನ್. ನೆಕ್ಕರೆ, ಸಮಿತಿ ಉಪಾಧ್ಯಕ್ಷ ಶಿವರಾಮ ಪೆರ್ನೆ, ಕಾರ್ಯದರ್ಶಿಗಳಾದ ರವಿ ಬೆಳ್ಳಿಪ್ಪಾಡಿ ನೆಕ್ಕರೆ, ಲಲಿತಾ ಎನ್. ನೆಕ್ಕರೆ, ಕೋಶಾಧಿಕಾರಿ ವಾಸು ಕೇಪುಳು, ಸದಸ್ಯರಾದ ಜನಾರ್ಧನ ಪೂಜಾರಿ ಬೆಳ್ತಂಗಡಿ, ಮಾಧವ ನೆಕ್ಕರೆ, ಶ್ರೀನಿವಾಸ ನೆಕ್ಕರೆ, ಪ್ರಮುಖರಾದ ಶಿವರಾಮ ಶೆಟ್ಟಿ, ಶ್ರೀಧರ ಗೌಡ, ಕೃಷ್ಣಪ್ಪ ಕೂಡಮರ, ಜನಾರ್ದನ ಬಂಗಾರಡ್ಕ, ವಿಶ್ವನಾಥ ನೆಕ್ಕರೆ, ಊರ ಸಮಸ್ತರು, ಭಕ್ತಾದಿಗಳು ಉಪಸ್ಥಿತರಿದ್ದರು.