ಮುಂಬಯಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಮಹಾರಾಷ್ಟ್ರದಲ್ಲಿ ಕಲ್ಲುತೂರಲಾಗಿದೆ. ತಪತಿ ಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಮಾಹಾರಾಷ್ಟ್ರದ ಜಲಗಾಂವ್‌ನಲ್ಲಿ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೈಲಿನಲ್ಲಿ ಗುಜರಾತ್‌ನಿಂದ ಕುಂಭಮೇಳಕ್ಕೆ ಭಕ್ತರು ಪ್ರಯಾಣಿಸುತ್ತಿದ್ದರು. ರೈಲು ಸೂರತ್‌ನಿಂದ ಛಾಪ್ರಾಕ್ಕೆ ಹೋಗುತ್ತಿದ್ದ ವೇಳೆ ಜಲಗಾಂವ್‌ನಲ್ಲಿ ಕಿಡಿಗೇಡಿಯೋರ್ವ ಕಲ್ಲುತೂರಿದ್ದಾನೆ.
ರೈಲಿನ ಕಿಟಿಕಿ ಗಾಜು ಒಡೆದಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ. ಬಾಬಾ ಬನಾರಸ್ ಎಂಬ ಎಕ್ಸ್ ಪೇಜ್‌ನಲ್ಲಿ ಕಲ್ಲುತೂರಾಟ ಮಾಡಿದ ವೀಡಿಯೊ ಮತ್ತು ಫೋಟೊ ಹಂಚಿಕೊಳ್ಳಲಾಗಿದೆ.ಜಲಗಾಂವ್ ರೈಲ್ವೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.