ಪೆರ್ನಾಜೆ: ಕರ್ನಾಟಕ ರಾಜ್ಯ ಡಾ .ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ವಿಶ್ವವಿದ್ಯಾನಿಲಯ ಮೈಸೂರ್ ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿದ್ವತ್ ಪರೀಕ್ಷೆಯ ಅಂತಿಮ ವಿಭಾಗದಲ್ಲಿ ಸಿಂಚನ ಲಕ್ಷ್ಮಿ ಕೋಡಂದೂರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ನಾಟ್ಯ ವಿದ್ಯಾಲಯ ಕುಂಬಳೆ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಅವರ ಶಿಷ್ಯೆ ಹಾಗೂ ವಿಟ್ಲ ಐ ಟಿ ಐ ಸುಪ್ರಜೀತ್ ಕಾಲೇಜಿನ ನಿವೃತ ಪ್ರಾಂಶುಪಾಲ ಕೆ. ರಘುರಾಮ ಶಾಸ್ತ್ರಿ ಹಾಗೂ ಸ್ವರ ಸಿಂಚನ ಸಂಗೀತ ಶಾಲೆ ಶಿಕ್ಷಕಿ ಸವಿತಾ ಕೊಡಂದೂರು ಅವರ ಪುತ್ರಿ.
ಸಿಂಚನ ಲಕ್ಷ್ಮೀ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ ಅಂತಿಮ ವರ್ಷದ ಡಾಟಾ ಸೈನ್ಸ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.