ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಆಶ್ರಯದಲ್ಲಿ ಮತ್ತು ಯುವ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು ವಲಯದ ಪ್ರಾಯೋಜಕತ್ವದೊಂದಿಗೆ ಫೆ.2 ರಂದು ನಡೆಯುವ ಪುತ್ತೂರು ತಾಲೂಕು ಮಟ್ಟದ ಒಕ್ಕಲಿಗ ಗೌಡ ಸಮಾಜದ ವಾರ್ಷಿಕ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಸಂಜೆ ಬಿಡುಗಡೆಗೊಳಿಸಲಾಯಿತು.
ಸಂಜೆ 6 ಗಂಟೆಗೆ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ದೇವರ ಗುಡಿಯ ಎದುರು ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಮುಕ್ವೆ, ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ್ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ಮುಂಡೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ, ಗೌರವಧ್ಯಕ್ಷ ಮೋಹನ್ ಗೌಡ ಪಾದೆ, ಪ್ರಧಾನ ಕಾರ್ಯದರ್ಶಿ ವರುಣ್ ಓಲಾಡಿ, ಕ್ರೀಡಾ ಕಾರ್ಯದರ್ಶಿ ಸಂಪ್ರೀತ್ ಗೌಡ ಕಡ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಶಿವ ಪ್ರಸಾದ್ ಕೈಂದಾಡಿ, ವಲಯ ಉಸ್ತುವಾರಿ ರಮೇಶ್ ಗೌಡ ಪಜೀಮಣ್ಣು, ಕ್ರೀಡಾ ಸಮಿತಿಯ ಸಂಚಾಲಕ ಮೋಹನ್ ಗೌಡ ನಡುಬೈಲು, ಪ್ರಚಾರ ಸಮಿತಿ ಸಂಚಾಲಕ ಗೋಪಾಲ್ ಗೌಡ ಕರೆಜ್ಜ, ಆರ್ಥಿಕ ಸಮತಿ ಸಂಚಾಲಕ ಚಿದಾನಂದ ಗೌಡ ಬಜಪ್ಪಳ, ಊಟ ಉಪಚಾರ ಸಮಿತಿ ಸಂಚಾಲಕ ಹರೀಶ್ ಗೌಡ ಕರಂಬಡ್ಕ, ಅಲಂಕಾರ ಸಮಿತಿ ಸಂಚಾಲಕ ಗುರುಪ್ರಸಾದ್ ವಾಲ್ತಾಜೆ, ಮತ್ತು ಶಾಂತಿಗೋಡು, ಆನಡ್ಕ, ಮುಂಡೂರು, ನರಿಮೊಗರು, ಕುರಿಯ ಗ್ರಾಮದ ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.