ಸೋಷಿಯಲ್‌ಮೀಡಿಯಾದಲ್ಲಿ ಭಾರಿ ವೈರಲ್ ಆದ ಮದುವೆ ಸುದ್ದಿ
ಬೆಳ್ತಂಗಡಿ: ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ರಮೆ ಎಂಬಲ್ಲಿಂದ ನಾಪತ್ತೆಯಾಗಿದ್ದ ಮುಸ್ಲಿಮ್ ಯುವತಿಯೊಬ್ಬಳು ಧರ್ಮಸ್ಥಳ ಸಮೀಪ ದೇವಸ್ಥಾನದಲ್ಲಿ ಹಿಂದು ಯುವಕನನ್ನು ಮದೆಯಾಗಿದ್ದು, ಈ ಮದುವೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪಟ್ರಮೆ ಗ್ರಾಮದ ಸುಹಾನ (19) ಕಂಪ್ಯೂಟರ್ ಕ್ಲಾಸ್‍ಗೆ ಹೋಗಿದ್ದವಳು ನಾಪತ್ತೆ ಆಗಿದ್ದಳು. ಈ ಬಗ್ಗೆ ಬಳಿಕ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಿನ್ನೆ ಈಕೆ ಹಿಂದೂ ಯುವಕ ಹರೀಶ್ ಗೌಡ (24) ಎಂಬಾತನ ಜೊತೆ ಮದುವೆಯಾಗಿ ಪತ್ತೆಯಾಗಿದ್ದಾಳೆ.
ಇಬ್ಬರಿಗೂ ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಧರ್ಮಸ್ಥಳ ಸಮೀಪ ಇರುವ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ನಿನ್ನೆ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿದ್ದು, ಗಂಡಿನ ಕಡೆಯವರು ಮದುವೆ ಬಂದಿದ್ದರು ಎನ್ನಲಾಗಿದೆ.
ಮದುವೆಯಾದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗಿ ಸ್ವಇಚ್ಛೆಯಿಂದ ಹೋಗಿ ಮದುವೆ ಆಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ.