ವಿಟ್ಲ : ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ಇವರ ವಾತ್ಸಲ್ಯ ಕಾರ್ಯಕ್ರಮದಡಿ ಪೆರ್ನೆ ವಲಯದ ಕೆದಿಲ ನಿವಾಸಿ ವಾತ್ಸಲ್ಯ ಸದಸ್ಯೆ ಕಮಲ ಅವರಿಗೆ ಮಂಜೂರಾದ ವಾತ್ಸಲ್ಯ ಕಿಟ್ಟನ್ನು ವಿತರಿಸಲಾಗಿದೆ.
ಮಾತೃ ಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ನಡೆಯುವ ವಾತ್ಸಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಕಿಟ್ ಅನ್ನು ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ ವಿತರಿಸಿದರು.
ಈ ಸಂದರ್ಭದಲ್ಲಿ ಕೆದಿಲ A ಒಕ್ಕೂಟದ ಸೇವಾಪ್ರತಿನಿದಿ ಶಾರದಾ, B ಒಕ್ಕೂಟದ ಸೇವಾಪ್ರತಿನಿದಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲ ಸದಸ್ಯರಾದ ಸದಸ್ಯರಾದ ಜಗದೀಶ್ ಕೆದಿಲ, ಶೀನಪ್ಪ, ಗಿರೀಶ, ಉಪಸ್ಥಿತರಿದ್ದರು.