ಕುಂದಾಪುರ : ಕನ್ನಡ ಭಾಷಾ ಅಕಾಡೆಮಿ ರಚನೆಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನೀಲ್ ಕುಮಾರ್ ಜೊತೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕುಂದಾಪುರ ಭಾಷಾ ಅಕಾಡೆಮಿಗೆ ರಚನೆ ಕುರಿತಂತೆ ಮನವಿ ನೀಡಿದ್ದು, ಈಗಾಗಲೇ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ರಚನೆಗೆ ಆದೇಶ ಆಗಿದೆ. ಅಲ್ಲಿ ಶೈಕ್ಷಣಿಕ, ಸಂಶೋಧನೆ ಮೊದಲಾದ ಅಧ್ಯಯನಾತ್ಮಕ ಚಟುವಟಿಕೆಗಳು ನಡೆಯಲಿವೆ. ಇದು ಕುಂದಾಪುರ ಭಾಷೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸಿ ಕೊಡಲಿದೆ. ಇದರ ಜತೆಗೆ ಅಕಾಡೆಮಿ ರಚನೆಯಾದರೆ ಸಂಶೋಧನೆ, ಪ್ರಕಟನೆ ಜತೆಗೆ ಕಲೆ, ಸಂಸ್ಕೃತಿಯ ಪ್ರಸಾರಕ್ಕೂ ಕೊಡುಗೆ ನೀಡಿದಂತಾಗುತ್ತದೆ.
ಸಚಿವರ ಕ್ಷೇತ್ರ ಹೆಬ್ರಿಯಲ್ಲಿ ಕನ್ನಡ ಮಾತನಾಡುವವರು ಇದ್ದಾರೆ. ಬ್ರಹ್ಮಾವರದಿಂದ ಬೈಂದೂರಿನವರೆಗೆ ಕುಂದಾಪುರ ಭಾಷೆ ಮಾತನಾಡುವವರು ಇದ್ದಾರೆ. ಆದ್ದರಿಂದ ಅಕಾಡೆಮಿ ರಚನೆಯಿಂದ ಈ ಭಾಗದ ಭಾಷೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹಿಂದುಳಿದ ಆಯೋಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.