ಪುತ್ತೂರು : ಕೋಡಿಂಬಾಡಿ ಕಜೆ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪೋಷಕರ ಆಶ್ರಯದಲ್ಲಿ ನೀವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಯಶೋಧ ಬಿ. ಅವರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅಭಿನಂದನೆ ನೆರವೇರಿಸಿ ಮಾತನಾಡಿ, ಸರಕಾರಿ ವೃತಿಯಲ್ಲಿ ನಿವೃತ್ತಿ ಸಹಜ.ನಿವೃತ್ತಿ ಹೊಂದಿದ ಯಶೋಧ ಟೀಚರ್ ಗೆ ಸಿಕ್ಕಿರುವುದು ನೋಡಿದರೆ ಅವರಲ್ಲಿ ಮಾತ್ರಶಕ್ತಿ, ಗುರುವಿನ ಶಕ್ತಿ ಎದ್ದು ಕಾಣುತ್ತಿದೆ ಎಂದ ಅವರು, ಅಂಗನವಾಡಿ ನೌಕರರಿಗೆ ಪಿಂಚಣಿ ಜಾಸ್ತಿ ಮಾಡುವ ಕೆಲಸ ಸರಕಾರ ಮಾಡುತ್ತದೆ. ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನೀಡಲಾಗಿದೆ ಎಂದರು.
ವೇದಿಕೆಯಲ್ಲಿ ಕೋಡಿಂಬಾಡಿ ಗ್ರಾಪಂ ಸದಸ್ಯರಾದ ಜಯಪ್ರಕಾಶ್ ಬದಿನಾರು, ಪೂರ್ಣಿಮಾ ಯತೀಶ್ ಶೆಟ್ಟಿ, ರೇವತಿ ವೀರಪ್ಪ ಪೂಜಾರಿ, ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷ ಕೈಪ ಕೇಶವ ಭಂಡಾರಿ, ಧನಲಕ್ಷ್ಮೀ ಸ್ವಾಸಹಾಯ ಸಂಘದ ಅಧ್ಯಕ್ಷೆ ಶಾರದಾ ಸಿ.ರೈ, ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಉಷಾ ಮುಖೇಶ್, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಅಭಿಷೇಕ್ ಬೆಳ್ಳಪ್ಪಾಡಿ, ಯಶೋಧ ಕಜೆ, ಹರಿಣಾಕ್ಷಿ, ಭಾರತಿ, ಬಾಲವಿಕಾಸ ಸಂಘದ ಅಧ್ಯಕ್ಷೆ ಶ್ರೀಮತಿ ಎನ್. ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಕಜೆ ಸ್ವಾಗತಿಸಿದರು.