ಪುತ್ತೂರು : ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಾಲಯದಲ್ಲಿ ಕಿರು ಷಷ್ಠಿ ಆಚರಣೆ ಜ.5 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅನ್ನ ಸಂತರ್ಪಣೆ ನೆರವೇರಿತು.
ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಅನುವಂಶೀಯ ಮೊಕ್ತೇಸ ಪ್ರವೀಣ್ ಕುಮಾರ್ ಕಡೆಂಜಿಗುತ್ತು, ಅರ್ಚಕ ರಮಾನಂದ ಭಟ್, ಆಡಳಿತ ಸಮಿತಿ ಉಪಾಧ್ಯಕ್ಷ ವೆಂಕಟೇಶ್ ಭಟ್ ಕೊಯರುಡೆ, ಕಾರ್ಯದರ್ಶಿ ನೂರಪ್ಪ ಗೌಡ ಪಟ್ಟೆತ್ತಾನ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು, ಊರ ಹಾಗೂ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.