ಪುತ್ತೂರು : ಶ್ರೀ ರಾಮ ಭಜನಾ ತಂಡ ಆನಡ್ಕ, ಪುತ್ತೂರು ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಭಜನಾ ಕೀರ್ತನ ಸಂಭ್ರಮ, ಭಕ್ತಿ-ಭಾವ- ಕುಣಿತದ ಸಮ್ಮಿಲನವು ಜ.5 ರಂದು ಆನಡ್ಕದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮ ಸಂಜೆ 7ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಡ್ಕದ ಶ್ರೀ ರಾಮ ಭಜನಾ ತಂಡ ಅಧ್ಯಕ್ಷ ಗುರುಪ್ರಸಾದ್ ವಾಲ್ತಾಜೆ, ಮುಖ್ಯ ಅತಿಥಿಯಾಗಿ ಪುತ್ತೂರು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ, ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಲೋಕೇಶ್ ಬೆತ್ತೋಡಿ, ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಪುತ್ತೂರು ಇದರ ಟ್ರಸ್ಟಿ ಮತ್ತು ಧಾರ್ಮಿಕ ಶಿಕ್ಷಣ ಬೋಧಕಿ ವಿ. ಪ್ರಭಾವತಿ, ಆನಡ್ಕ ಶ್ರೀ ರಾಮ ಭಜನಾ ತಂಡದ ಗೌರವ ಸಲಹೆಗಾರ ದಿನೇಶ್ ಗೌಡ ಮಜಲು, ಗುರುವಂದನೆಯಾಗಿ ಆನಡ್ಕದ ಶ್ರೀ ರಾಮ ಭಜನಾ ತಂಡ ಕುಣಿತ ಭಜನೆ ತರಬೇತುದಾರ ಕಾರ್ತಿಕ ಆರ್ಯಾಪು, ಮತ್ತೋರ್ವ ಶ್ರೀ ರಾಮ ಭಜನಾ ತಂಡದ ಭಜನಾ ತರಬೇತುಗಾರ್ತಿ ಪೂರ್ಣಿಮಾ ಬಿರ್ಮನಕಜೆ ಭಾಗಿಯಾಗಲಿದ್ದಾರೆ.
ಬಳಿಕ ಸಂಜೆ 4:30ಕ್ಕೆ ಬೀಟಿಕಾಡುನಿಂದ ಆನಡ್ಕದವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಶನೀಶ್ವರ ಭಜನಾ ತಂಡ ಬನ್ನೂರು, ಶ್ರೀ ಸುಬ್ರಾಯ ಭಜನಾ ತಂಡ ಸರ್ವೆ ಪುತ್ತೂರು, ಶ್ರೀ ವಿದ್ಯಾನಿಧಿ ಸರಸ್ವತಿ ಭಜನಾ ತಂಡ ಕೈಕಾರ ಪುತ್ತೂರು, ಚೆಂಡೆ-ಶ್ರೀ ವಿಷ್ಣು ಸಿಂಗಾರಿಮೇಳಂ ಇರ್ದೆ , ಪುತ್ತೂರು ಇವರು ಭಾಗವಹಿಸಲಿದ್ದಾರೆ.
ಸಂಜೆ 6:30ಕ್ಕೆ ಶ್ರೀ ರಾಮ ಮಹಿಳಾ ಭಜನಾ ತಂಡದಿಂದ – ಭಜನೆ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 9 ಗಂಟೆಯಿಂದ ಕುಣಿತ ಭಜನೆ, ರಾತ್ರಿ 9:30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ರಾಮ ಭಜನಾ ತಂಡ ಆನಡ್ಕ, ಪುತ್ತೂರು ಇದರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಭಕ್ತರನ್ನು ಸ್ವಾಗತಿಸುತ್ತಿದ್ದಾರೆ.