ಗ್ರಾಪಂ ಕಚೇರಿಯಲ್ಲಿ ಮೌಲ್ವಿಯಿಂದ ಪ್ರಾರ್ಥನೆ : ಹಿಂದು ಸಂಘಟನೆಗಳ ವಿರೋಧ

ಕಾಂಗ್ರೆಸ್‌-ಎಸ್‌ಡಿಪಿಐ ಅಧಿಕಾರ ಸ್ವೀಕಾರ ವೇಳೆ ಮೌಲ್ವಿಯನ್ನು ಕರೆಸಿ ಪ್ರಾರ್ಥನೆ

ಉಡುಪಿ: ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ಸಲ್ಲಿಸಿರುವ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಹಿಂದೂ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿವೆ.

ಗಂಗೊಳ್ಳಿ ಗ್ರಾಮ ಪಂಚಾಯತ್ ಮೂರು ದಶಕಗಳ ಬಳಿಕ ಕಾಂಗ್ರೆಸ್​ ಮತ್ತು ಎಸ್​ಡಿಪಿಐ ಮೈತ್ರಿಯ ತೆಕ್ಕೆಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರ ಹಂಚಿಕೆಯಾಗಿದೆ. ಕಾಂಗ್ರೆಸ್​ನ ಜಯಂತಿ ಖಾರ್ವಿ ಎಂಬುವರು ಅಧ್ಯಕ್ಷರಾಗಿದ್ದರೆ, ಎಸ್​ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಉಪಾಧ್ಯಕ್ಷರಾಗಿದ್ದಾರೆ. ತಬ್ರೇಜ್ ಉಪಾಧ್ಯಕ್ಷ ಅಧಿಕಾರ ಸ್ವೀಕಾರ ವೇಳೆ ಎಸ್​ಡಿಪಿಐ ಮುಖಂಡರು ಮೌಲ್ವಿಯನ್ನು ಕರೆಸಿ ಪ್ರಾರ್ಥನೆ ಮಾಡಿಸಿದ್ದಾರೆ.































 
 

ಗ್ರಾಮ ಪಂಚಾಯತ್​ ಕಚೇರಿಯಲ್ಲಿ ಪಾರ್ಥನೆ ಸಲ್ಲಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೌಲ್ವಿ ಪಾರ್ಥನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಎಚ್ಚರ ಹಿಂದೂ ಎಚ್ಚರ ಎಂದಿವೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ನಾನಾ ರೀತಿಯ ಚರ್ಚೆಗಳು ಶುರುವಾಗಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top