ಪುತ್ತೂರು: ದ.ಕ. ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಅವ್ಯಾಚ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ಮೆಸೇಜ್ ಹಾಕಿರುವುದನ್ನು ಖಂಡಿಸಿ ಇದಕ್ಕೆ ಕಾರಣನಾದವನ ವಿರುದ್ಧ ಪಿ.ನವೀನ್ ಕುಮಾರ್ ರೈ ಎಂಬವರು ಪುತ್ತೂರು ಗ್ರಾಮಾಂತರ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.
ಪುತ್ತೂರು ತಾಲೂಕು ಇಂದಿರಾನಗರ ನಿವಾಸಿ ಅವಿನಾಶ್ ಜೋಗಿ ಸಾಮಾಜಿಕ ಜಾಲತಾಣದಲ್ಲಿ ನಾನು ಅವಿನಾಶ್, ಅರುಣ್ ಕುಮಾರ್ ಪುತ್ತಿಲನಿಗೆ ಜೈ, ನಳಿನ್ ಕುಮಾರ್ ಕಟೀಲ್ ಫಕ್, ನನಗೆ ಅರುಣಣ್ಣನೇ ಹೀರೋ, ನಳಿನ್ ಕುಮಾರ್ ಲಾಟ್ ಪೋಟ್ ಎಂದು ಹೇಳಿ ಹೀಯಾಳಿಸಿರುತ್ತಾನೆ. ಇದನ್ನು ನಳಿನ್ ಕುಮಾರ್ ಕಟೀಲ್ ಅವರ ಗ್ರೂಪ್‌ಗೆ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿನಿ ವಾಯ್ಸ್ ಮೆಸೇಜ್ ನ್ನು ನಿರಂತರವಾಗಿ ಕಳುಹಿಸುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ತಮ್ಮ ಗಮನಕ್ಕೆ ವಾಯ್ಸ್ ರೆಕಾರ್ಡ್‌ನ್ನು ತೋರಿಸಲು ನಾನು ಬದ್ಧನಿದ್ದೇನೆ ಎಂದು ಪಿ. ನವೀನ್ ಕುಮಾರ್ ರೈ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವಿನಾಶ್ ಜೋಗಿ ವಿರುದ್ಧ ಈ ಮೊದಲೇ ಹಲವು ಪ್ರಕರಣಗಳು ಕೋರ್ಟ್‌ಗಳಲ್ಲಿ ಇದ್ದು, ರೌಡಿಶೀಟರ್ ಆಗಿರುತ್ತಾನೆ.
ಆದ್ದರಿಂದ ಅವಿನಾಶ್ ಜೋಗಿ ಎಂಬವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿ. ನವೀನ್ ಕುಮಾರ್ ರೈ ಯವರು ಸಂಪ್ಯ ಗ್ರಾಮಾಂತರ ಠಾಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.