ಸುಳ್ಯ: ಶ್ರೀ ಚೆನ್ನಕೇಶವ ದೇವಸ್ಥಾನದ ನೂತನ ಬ್ರಹ್ಮರಥದ ಭೂ ಸ್ಪರ್ಶ ಕಾರ್ಯಕ್ರಮ ಇಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಉದ್ಘಾಟಿಸಿದರು.
ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕುರುಂಜಿ ಚಿದಾನಂದ ಗೌಡ, ರಥಶಿಲ್ಪಿ ರಾಜಗೋಪಾಲ ಅಚಾರ್ಯ, ಲಯನ್ಸ್ ರಾಜ್ಯಪಾಲ ಎಂ.ಬಿ. ಸದಾಶಿವ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಎಸ್. ಅಂಗಾರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಹಶೀಲ್ದಾರ್ ಮಂಜುಳಾ, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ಅಕ್ಷಯ್ ಕೆ ಸಿ, ಹರಪ್ರಸಾದ್ ತುದಿಯಡ್ಕ, ಕೇರ್ಪಳ ಲಿಂಗಪ್ಪ ಗೌಡ, ಜಯಪ್ರಕಾಶ್ ರೈ, ಮೀನಾಕ್ಷಿ ಗೌಡ, ಶೋಭಾ ಚಿದಾನಂದ, ಡಾ.ಐಶ್ವರ್ಯ ಕೆಸಿ, ಡಾ.ಗೌತಮ್ ಗೌಡ ಎ ಜಿ, ಹರೀಶ್ ಕಂಜಿಪಿಲಿ, ಕೆ ವಿ ಹೇಮನಾಥ, ಕೃಷ್ಣ ಅರಂಬೂರು, ನಾರಾಯಣ ಕೇಕ ಮತ್ತಿತರರು ಉಪಸ್ಥಿತರಿದ್ದರು.