ಪುತ್ತೂರು : ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಇಕೋ ಕ್ಲಬ್ ಘಟಕ ವತಿಯಿಂದ “ಜೇನು ಕೃಷಿ ಮತ್ತು ನಾವು” ಎಂಬ ವಿಶೇಷ ಉಪನ್ಯಾಸಕಾರ್ಯಕ್ರಮ ಕಾಲೇಜಿನ ಸುಜ್ಞಾನ ದೀಪಿಕಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಜೇನು ಕೃಷಿಕರ ತರಬೇತುದಾರ ಮತ್ತು ಬೆಟ್ಟಂಪಾಡಿ ನವೋದಯ ಪ್ರೌಢ ಶಾಲಾ ಶಿಕ್ಷಕ ರಾಧಾಕೃಷ್ಣ ಆರ್. ಕೋಡಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿ, ವಿಶಿಷ್ಟ ಕೃಷಿ ವಿಧಾನವಾಗಿರುವ ಜೇನು ಕೃಷಿಯಿಂದ ಪ್ರಕೃತಿ ಮತ್ತು ಮಾನವರಿಗೆ ಆಗುವ ವಿವಿಧ ಬಗೆಯ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಅರಿವು ಮೂಡಿಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಅಕ್ಷತಾ ಎ.ಪಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಕೋ ಕ್ಲಬ್ ಘಟಕದ ಸಂಯೋಜಕ ತಿಲಕ್ ಟಿ. ಮತ್ತು ಕಾನೂನು ಉಪನ್ಯಾಸಕಿ ಆಶಿತಾ ಕೆ., ವಿದ್ಯಾರ್ಥಿ ಸಂಯೋಜಕ ದೀಪಕ್ ಚಾರ್ಮಾಡಿ ಮತ್ತು ವಿದ್ಯಾರ್ಥಿ ದೀಪಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.