ಮಧ್ಯಪ್ರದೇಶದ : ಮುಸ್ಲಿಂ ವ್ಯಕ್ತಿಯೋರ್ವ ಪ್ರದೀಪ್ ಸೋಲಂಕಿ ಎಂದು ಹಿಂದೂ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದು ಮಾತ್ರವಲ್ಲದೆ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ.
ಮೊಕ್ಸಿನ್ ಎಂಬ ಮುಸ್ಲಿಂ ಯುವಕ ತನ್ನ ಹೆಸರನ್ನು ಪ್ರದೀಪ್ ಎಂದು ಬದಲಾಯಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದಾನೆ. ಈತ ಪ್ರದೀಪ್ ಸೋಲಂಕಿ ಎಂದು ಹೇಳಿಕೊಂಡು ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆರೋಪಿ ಮೂರು ವರ್ಷಗಳಿಂದ ಆಕೆಗೆ ಲೈಂಗಿಕವಾಗಿ ಶೋಷಿಸುತ್ತಿದ್ದ.
ಸಂತ್ರಸ್ತೆ ಕುಟುಂಬ ಸಮೇತ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತೆಯ ಸುನೀತಾ ಜಪ್ರಿಯಳಿಂದ ಮೊಕ್ಸಿನ್ ಮುಲ್ತಾನಿಯ ಪರಿಚಯವಾಗಿದೆ. ಸುನೀತಾ ಜಪ್ರಿಯ ಗೆಳತಿಗೆ ಆತನನ್ನು ಹಿಂದೂ ಹುಡುಗ ಎಂದು ಪರಿಚಯಿಸಿ ತನ್ನ ಸ್ನೇಹಿತೆಗೆ ಮೋಸ ಮಾಡಿದ್ದಾಳೆ.
ಬಳಿಕ ಸ್ನೇಹಿತರಾಗಿ ಆಕೆಯ ಜೊತೆ ಮೊಕ್ಸಿನ್ ದೈಹಿಕ ಸಂಪರ್ಕ ಬೆಳೆಸಿದಲ್ಲದೆ ವೀಡಿಯೊ ಸೆರೆಹಿಡಿದು ವೀಡಿಯೊವನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆಂದು ಸಂತ್ರಸ್ತೆಯ ಕುಟುಂಬಕ್ಕೆ ಈ ವಿಷಯ ತಿಳಿದ ತಕ್ಷಣ ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಕೊತ್ವಾಲಿ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಯಾದ ಪ್ರದೀಪ್ ಅಲಿಯಾಸ್ ಮೊನ್ಸಿನ್ ಖಾರ್ಗೋನ್ ಜಿಲ್ಲೆಯ ಕಾಸ್ರವಾಡ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಆದರೆ ಆತ ಧಾರ್ ಜಿಲ್ಲೆಯ ಮನವಾರ್ ನವ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿದ ಹಿಂದೂ ಸಂಘಟನೆಗಳು ಕೂಡ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಶಿವಸೇನೆ ಹಾಗೂ ಇತರ ಹಿಂದೂ ಸಂಘಟನೆಗಳ ಸದಸ್ಯರು ಕೊತ್ವಾಲಿ ಠಾಣೆಗೆ ಆಗಮಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳ ಸದಸ್ಯರು ಒತ್ತಾಯಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.