ಪುತ್ತೂರು : ಇಂದು ಪುತ್ತೂರು ಮತ್ತು ಮಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಲಿದ್ದಾರೆ.
ಸಂಜೆ 6.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಪುತ್ತೂರಿಗೆ 8 ಗಂಟೆಗೆ ತಲುಪಲಿದ್ದಾರೆ. ಪುತ್ತೂರಿನಲ್ಲಿ ಸುಪ್ರೀಂ ಕೋರ್ಟಿನ ಅಡಿಷನಲ್ ಸೋಲಿಸಿಟರ್ ಜಿನರಲ್ ಈಶ್ವರಮಂಗಲದ ಹನುಮಗಿರಿಯ ಕೆ.ಎಂ.ನಟರಾಜ್ ಅವರ ನೂತನ ಗೃಹ ಪ್ರವೇಶ ಇತ್ತಿಚೆಗೆ ನಡೆದಿದ್ದು, ಕೆ.ಎಂ.ನಟರಾಜ್ ಅವರ ಮನೆಗೆ ವಿಜಯೇಂದ್ರ ಭೇಟಿ ನೀಡಲಿದ್ದಾರೆ.
ಅಲ್ಲಿಂದ 8.30 ಕ್ಕೆ ಹೊರಟು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಪುತ್ರನ ಅಡ್ಯಾರ್ ಗಾರ್ಡನ್ ನಲ್ಲಿ ಜರಗುವ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.