ದ. ಕ. ಜಿಲ್ಲಾ. ಪಂಚಾಯತ್‍. ಉನ್ನತ. ಹಿರಿಯ. ಪ್ರಾಥಮಿಕ ಸತ್ತಿಕ್ಕಲ್ಲು ಶಾಲಾ  ಮಕ್ಕಳಿಗೆ  ಡೆಸ್ಕ್ ಮತ್ತು ಬೆಂಚು ವಿತರಣೆ

ಕೆದಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ನೆ ವಲಯದ ಕೆದಿಲ ಕಾರ್ಯಕ್ಷೇತ್ರದ  ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಿಂದ  ಸತ್ತಿಕ್ಕಲ್ಲಿನ ದ. ಕ. ಜಿ. ಪಂ. ಉ. ಹಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ  5 ಡೆಸ್ಕ್ ಮತ್ತು 5 ಬೆಂಚನ್ನು ನೀಡಲಾಯಿತು.

ಶಾಲಾ  ಮುಖ್ಯೋಪಾಧ್ಯಯ ಮಂಜುನಾಥ ಮತ್ತು  ಅಧ್ಯಾಪಕ ವೃಂದ ಹಾಗೂ  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಿಯಾಝ್,  ಉಪಾಧ್ಯಕ್ಷ ಶ್ವೇತರವರಿಗೆ  ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ 5 ಡೆಸ್ಕ್ ಮತ್ತು 5 ಬೆಂಚನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕೆದಿಲ “ಬಿ” ಒಕ್ಕೂಟದ  ಅಧ್ಯಕ್ಷೆ  ಮೀನಾಕ್ಷಿ, ಉಪಾಧ್ಯಕ್ಷ ಸುಂದರ, ಸೇವಾ ಪ್ರತಿನಿಧಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ  ಸದಸ್ಯರಾದ, ಜಗದೀಶ, ಗಿರೀಶ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top