ಪುತ್ತೂರು : ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಇದರ ತೃತೀಯ ವಾರ್ಷಿಕೋತ್ಸವವು ಪುತ್ತೂರು ಕಲ್ಲೆಗ ಭಾರತ ಮಾತಾ ಸಭಾಭವನದಲ್ಲಿ ಇಂದು ಜರಗಿತು.
ಈ ಸಂದರ್ಭದಲ್ಲಿ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು
ಸಮಾರಂಭದ ಅಧ್ಯಕ್ಷತೆ ಪ್ರೊ ಎ. ವಿ. ನಾರಾಯಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ತಾಳ್ತಜೆ ವಸಂತಕುಮಾರ, ಡಾ ಸುರೇಶ್ ಪುತ್ತೂರಾಯ, ಕೆ.ಕೃಷ್ಣಕುಮಾರ್ ಪೂಂಜ, ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಕೈಯೂರು ನಾರಾಯಣ ಭಟ್, ಕಾರ್ಯದರ್ಶಿ ದಿವಾಕರ್ ಆಚಾರ್ಯ ಗೇರುಕಟ್ಟೆ, ಸಂಚಾಲಕ ಭಾಸ್ಕರ ಬಾರ್ಯ, ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ ಮೊದಲಾದವರು ಉಪಸ್ಥಿತರಿದ್ದರು.