ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪುತ್ತೂರು: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಡಿ.20ರಂದು ನಡೆದಿದೆ.

ಭಕ್ತಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಕಿಶೋರ್ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಕಿಶೋರ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಕಿಶೋರ್ ಅವರ ಪತ್ನಿ ಚಂದ್ರಾವತಿ ಮತ್ತು ಪುತ್ರಿ ಬೆಳಿಗ್ಗೆ ಗಂಟೆ 10-30ಕ್ಕೆ ಪುತ್ತೂರಿಗೆ ಆಸ್ಪತ್ರೆಗೆ ಹೋಗಿದ್ದು ಮಧ್ಯಾಹ್ನದ ವೇಳೆಗೆ ಮನೆಗೆ ಬಂದಾಗ ಘಟನೆ ನಡೆದಿತ್ತು. ಕಿಶೋರ್ ಅವರ ಮನೆಯ ಮುಂಭಾಗದ ಒಂದು ಕೋಣೆಯಲ್ಲಿ ಅಂಗಡಿ ಮಾಡಿಕೊಂಡಿದ್ದು ಹಿಂಭಾಗದಲ್ಲಿ ಮನೆಮಂದಿ ವಾಸವಾಗಿದ್ದಾರೆ. ಮನೆಯ ಹಿಂಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಒಳನುಗ್ಗಿರುವ ಕಳ್ಳರು ಕಳ್ಳತನ ನಡೆಸಿದ್ದಾರೆ.

ಧರೋಡೆಕೋರರು ಮನೆಯೊಳಗಿದ್ದ ಗೋದ್ರೆಜ್ ಬಾಗಿಲನ್ನು ಮುರಿದು ಗೋದ್ರೆಜ್ನಲ್ಲಿದ್ದ 11 ಪವನ್‌ ಚಿನ್ನಾಭರಣ ಹಾಗೂ ರೂ.20 ಸಾವಿರ ನಗದು ಹಣವನ್ನು ದೋಚಿದ್ದಾರೆ. ಚಂದ್ರಾವತಿ ಅವರ ಚಿನ್ನದ ಆಭರಣ ಹಾಗೂ ಕಿಶೋರ್ ಧರಿಸುತ್ತಿದ್ದ ಚಿನ್ನದ ಚೈನ್ ಕಳ್ಳರ ಪಾಲಾಗಿದೆ. ಇತರ ಯಾವುದಾದರೂ ವಸ್ತುಗಳನ್ನು ಕದ್ದೊಯ್ದಿದ್ದಾರೆಯೇ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ.































 
 

ಪ್ರಕರಣ ಬೆಳಕಿಗೆ ಬಂದ ತಕ್ಷಣ ಘಟನಾ ಸ್ಥಳಕ್ಕೆ ಸಂದ್ಯ ಪೊಲೀಸ್ ಠಾಣೆಯ ಎನ್ನೆ ಜಂಬೂರಾಜ್ ಮಹಾಜನ್, ಅಪರಾಧ ವಿಭಾಗದ ಎಸ್ಸೆ ಸುತ್ಮಾ ಭಂಡಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ  ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಳ್ಳಲಾಗಿದ್ದು ಪರಿಶೀಲನೆ ನಡೆಸಲಾಗಿದೆ. ಜ್ವಾನ ಮನೆಯ ಒಳಗೆ ಹಾಗೂ ಭಕ್ತಕೋಡಿ ಕಡೆಗೆ ಓಡಿದ್ದು ಭಕ್ತಕೋಡಿ ಜಂಕ್ಷನ್‌ನ ಅನತಿ ದೂರದವರೆಗೆ ಓಡಿ ನಿಂತಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಸಿ ಕ್ಯಾಮರಾ ಇಲ್ಲದೇ ಇರುವುದರಿಂದ ಕಳ್ಳರಿಗೆ ಕಳ್ಳತನ ಮಾಡಲು ಸುಲಭವೆನಿಸಿದೆ.

ಇದರಿಂದ ಅಲ್ಲಲ್ಲಿ ನಿರಂತರ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದರಿಂದ ಭಯದ ವಾತವರಣ ನಿರ್ಮಾಣವಾಗಿದೆ., ಇನ್ನು ಯಾವ ಧೈರ್ಯದಿಂದ ಮನೆ ಬಿಟ್ಟು ಹೊರಗೆ ಹೋಗುವುದೆಂದು  ಸ್ಥಳದಲ್ಲಿದ್ದವರಲ್ಲಿ ಆತಂಕ ಮೂಡಿದೆ. ಪೊಲೀನರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಕಳ್ಳರನ್ನು ಶೀಘ್ರದಲ್ಲಿ ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಹಾಗೂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಭೇಟಿ ನೀಡಿದ್ದಾರೆ.

ಸರ್ವೆ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ನಿರಂತರವಾಗಿ ನಡೆಯುತ್ತಿದ್ದು ಕಳ್ಳರು ತಮ್ಮ ಕರಾಮತ್ತು ತೋರಿಸುತ್ತಲೇ ಇದ್ದಾರೆ. ಕೆಲವೇ ತಿಂಗಳ ಹಿಂದೆ ಪರ್ವ ಗ್ರಾಮದ ಕಾಡಬಾಗಿಲು ಎಂಬಲ್ಲಿ ಸಾರಮ್ಮ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾತ್ರಿ ಮನೆಯ ಕಿಟಕಿಗಳನ್ನು ಮುರಿದು ಒಳನುಗ್ಗಿದ್ದ ಕಳ್ಳರು ಚಿನ್ನ, ಹಣ ಹಾಗೂ ಇನ್ನಿತರ ವಸ್ತುಗಳನ್ನು ಕದ್ದೊಯ್ದಿದ್ದರು. ಆದರೆ ಕಳ್ಳರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಇತ್ತೀಚೆಗೆ ಭಕ್ತಕೋಡಿ ಪಶು ಆರೋಗ್ಯ ಕೇಂದ್ರದ ಬಳಿಯಿರುವ ಆಶೋಕ್ ಎಸ್.ಡಿ ಎಂಬವರಿಗೆ ಸೇರಿದ ಅಂಗಡಿಯಿಂದ ಎರಡು ಬಾರಿ ಕಳ್ಳತನ ನಡೆದಿತ್ತು.

ಕೆಲವು ವರ್ಷಗಳ ಹಿಂದೆ ಭತ್ತಕೋಡಿ ಶ್ರೀ ರಾಮ ಭಜನಾ ಮಂದಿರದ ಬಳಿಯ ಅಡಿಕೆ ಅಂಗಡಿಯೊಂದರಿಂದ ಹಾಡಹಗಲೇ ರೂ.50 ಸಾವಿರ ನಗದು ಕಳ್ಳತನವಾಗಿತ್ತು. ಕೆಲವು ವರ್ಷಗಳ ಹಿಂದೆ ಭಕ್ತಶೋಡಿಯಲ್ಲಿರುವ ಶೀನಪ್ಪ ಪೂಜಾರಿ ಎಂಬವರ ಅಂಗಡಿಯಿಂದ ಸಿಸಿ ಟಿವಿಯ ಡಿವಿಆ‌ರ್ ಸಮೇತ ನಗದು ಕಳ್ಳತನವಾಗಿತ್ತು. ಹೀಗೇ ಸರ್ವೆ ಗ್ರಾಮದಲ್ಲಿ ಕಳ್ಳತನದ ಸರಮಾಲೆಯೇ ನಡೆದರೂ ಕಳ್ಳರು ಮಾತ್ರ ಪೊಲೀಸರ ಬಲೆಗೆ ಬೀಳದೇ ಇರುವುದು ಮತ್ತಷ್ಟು ಕಳ್ಳತನಕ್ಕೆ ಕಾರಣವಾಗುತ್ತಿದೆ ಎನ್ನವುದು ಸಾರ್ವಜನಿಕರಲ್ಲಿ  ಆತಂಕಕ್ಕೆ ಗುರಿಯಾಗಿದೆ.

ಈ ಪ್ರಕರಣ ಸ್ಥಳೀಯರ ಕೈವಾಡ ಇರಬಹುದು ಎಂಬ  ಶಂಕೆ ಮೂಡಿದೆ.  ಚಂದ್ರವತಿಯವರ ಮನೇಲಿ ನಡೆದ ಕಳ್ಳತನದ ವಿಚಾರವಾಗಿ ಹಲವು ಅನುಮಾನಗಳಿಗೆ ಕಂಡು ಬಂದಿದೆ. ಚಂದ್ರಾವತಿಯವರು ಪುತ್ತೂರಿಗೆ ಹೋಗುವುದನ್ನು ತಿಳಿದುಕೊಂಡ ಯಾರೋ ಮನೆಗೆ ನುಗ್ಗಿ ಕಳ್ಳತನ ನಡೆಸಿರಬಹುದು ಅಥವಾ ಹೊರಗಿನಿಂದ ಇನ್ಯಾರನ್ನೋ ಕರೆಸಿ ಕಳ್ಳತನ ಮಾಡಿರಬಹುದೇ ಎನ್ನುವ ಕುರಿತು ಸಾರ್ವಜನಿಕ ವಲಯದಲ್ಲಿ ಸಂಶಯ ಹುಟ್ಟು ಹಾಕಿದೆ.

ಹಾಡ ಹಗಲೇ ಇಂತಹ ಕೃತ್ಯ ನಡೆಸುವುದೆಂದರೆ ಅದು ಮನೆಯ ಬಗ್ಗೆ ಪೂರ್ವಾಪರ ಗೊತ್ತಿರುವವರ ಕೈವಾಡ ಇರಬಹುದು ಎನ್ನುವ ಅನುಮಾನ ಪ್ರಬಲವಾಗಿ ಕೇಳಿ ಬಂದಿದೆ. ಪೊಲೀಸರು ಸಮಗ್ರ ತನಿಖೆ ಮಾಡುವ ಮೂಲಕ ಕಳ್ಳರ ಹೆಡೆಮುರಿ ಕಟ್ಟಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ಸ್ಥಳೀಯವಾಗಿ ಹೊರರಾಜ್ಯದ ಕಾರ್ಮಿಕರು ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದು ಅವರ ಬಗ್ಗೆಯೂ ನಿಗಾ ವಹಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಹೊರ ರಾಜ್ಯದ ಕಾರ್ಮಿಕರು ಸ್ಥಳೀಯ ಗ್ರಾ.ಪಂ ಅಥವಾ ಇನ್ನಿತರ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಅಥವಾ ಗುರುತುಪತ್ರ ಪಡೆದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top