ನೌಕರರಿಗೆ ಪಿಎಫ್ ಹಣ ವಂಚಿಸಿದ ಪ್ರಕರಣ
ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಟೀಂ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ. ಪಿಎಫ್ಒ ರೀಜನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ ಪುಲಕೇಶಿ ನಗರ ಪೊಲೀಸರಿಗೆ ವಂಚನೆ ಕುರಿತು ಬರೆದಿದ್ದಾರೆ. ಆ ಪ್ರಕಾರ ಠಾಣೆಯಲ್ಲಿ ಕೇಸ್ ದಾಖಲಾಗಿ ಕೋರ್ಟ್ ವಾರಂಟ್ ಜಾರಿಗೊಳಿಸಿದೆ.
ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯನ್ನು ಉತ್ತಪ್ಪ ನಡೆಸುತ್ತಿದ್ದಾರೆ. ಕಂಪನಿಯ ಹಲವು ನೌಕರರ ಭವಿಷ್ಯ ನಿಧಿ ಹಣವನ್ನು ರಾಬಿನ್ ಉತ್ತಪ್ಪ ಸರಕಾರಕ್ಕೆ ಪಾವತಿಸಿಲ್ಲ ಎನ್ನಲಾಗಿದೆ.
ನೌಕರರ ಸಂಬಳದಿಂದ ಹಣ ಕಡಿತಗೊಳಿಸಿದ್ದರೂ ಸರಕಾರಕ್ಕೆ ಪಾವತಿಸದೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂಬಳದಲ್ಲಿ ಪಿಎಫ್ ಹಣ ಕಟ್ ಮಾಡಿಕೊಂಡು ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂ. ಪಿಎಫ್ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.