ಪುತ್ತೂರು: ಬನ್ನೂರು ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಮಾದರಿ ಗ್ರಾಮ ವಿಕಾಸ ಕೇಂದ್ರ, ಒಕ್ಕೂಟ, ಹಿರಿಯ ವಿದ್ಯಾರ್ಥಿಗಳ ಸಂಘ, ಬೀರಿಗ ನವಸಾಕ್ಷರರ ಸಹಯೋಗದಲ್ಲಿ ಅಕ್ಷರೋತ್ಸವ ಮತ್ತು ಬಾಲಮೇಳ ಕಾರ್ಯಕ್ರಮ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಅಂಗನವಾಡಿ ಪುಟಾಣಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮತ್ತು ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣಮೂಲ್ಯ ಅವರು ಶೂನ್ಯ ಕಸ ನಿರ್ವಹಣೆ, ಕಸಮುಕ್ತ ಮನೆ ನಿರ್ಮಾಣ ಬಗ್ಗೆ ಸಂವಾದ-ಸಂಕಲ್ಪ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಾಧಕರು ಹಾಗೂ ಸಹಕಾರಿಗಳನ್ನು ಗೌರವಿಸಲಾಯತು. ಗ್ರಾಮೀಣ ಕ್ರೀಡಾಕೂಟದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ರೋಟರಿ ಕ್ಲಬ್ ಸ್ವರ್ಣ ಪುತ್ತೂರು ಅಧ್ಯಕ್ಷ ಸುರೇಶ್, ಬನ್ನೂರು ಗ್ರಾಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯೆ ಜಯ ಶುಭ ಹಾರೈಸಿದರು. ಪಂಚಾಯತ್ ಸದಸ್ಯರಾದ ರಾಘವೇಂದ್ರ, ಶ್ರೀನಿವಾಸ ಪೆರ್‍ವೋಡಿ, ಗಣೇಶ್, ಹರೀಣಾಕ್ಷಿ, ಜಿಲ್ಲಾ ಸಂಘದ ಅಧ್ಯಕ್ಷೆ ತಾರಾ ಬಳ್ಳಾಲ್, ನವಸಾಕ್ಷರೆ ಸೇಸಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಳಿನಿ ರಾಜೇಶ್, ಬಾಲವಿಕಾಸ ಸಮಿತಿ ಸದಸ್ಯೆ ಯಮುನಾ ಮತ್ತಿತರರು ಉಪಸ್ಥಿತರಿದ್ದರು.
ಸ್ವಾತಿ ಗಣೇಶ್ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ನಿರೂಪಿಸಿ, ವಂದಿಸಿದರು. ಸಂಧ್ಯಾ, ಶ್ರೇಯಾ, ರಕ್ಷಿತಾ ಸಹಕರಿಸಿದರು.