ವಿಟ್ಲ : ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಡಿ.21 ರಿಂದ ಡಿ. 25ರ ತನಕ ನಡೆಯಲಿದೆ.
ಡಿ.21 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಅಡ್ಯಲಾಯ ದೈವಸ್ಥಾನ ಕಬಕದಿಂದ ಹಸಿರು ಹೊರೆಕಾಣಿಕೆಯ ಭವ್ಯ ರಥಯಾತ್ರೆ ನಡೆಯಲಿದ್ದು, ಅಡ್ಯಲಾಯ ದೈವಸ್ಥಾನದ ಅಧ್ಯಕ್ಷ ಸತೀಶ್ ರೈ ಡಿಂಬ್ರಿಗುತ್ತು ಉಪಸ್ಥಿತಿಯಲ್ಲಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಭವ್ಯ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ಡಿ.21 ಹಾಗೂ ಡಿ.22 ರಂದು ಜರುಗಲಿದೆ.
ಡಿ.23 ರಂದು ಸಾನ್ನಿಧ್ಯವೃದ್ಧಿ ಬ್ರಹ್ಮಕಲಶ ಅಭಿಷೇಕ, ಪ್ರತಿಷ್ಠಾ ಬಲಿ, ದೈವಗಳಿಗೆ ಬ್ರಹ್ಮಕಲಶದ ಮಹಾತಂಬಿಲ ಸೇವೆ, ಮಹಾಪೂಜೆ, ನಿತ್ಯವಿಧಿ ನಿರ್ಣಯ, ನಡೆ ಪ್ರಾಥನೆ, ಮಹಾ ಮಂತ್ರಾಕ್ಷತೆ, ಮಹಾ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಡಿ.24ರಂದು ಮಧ್ಯಾಹ್ನ 2 ಗಂಟೆಗೆ ಭಂಡಾರ ಹೊರಡುವುದು ಮತ್ತು ರಾತ್ರಿ 9 ಗಂಟೆಗೆ ವೈದ್ಯನಾಥ ನೇಮೋತ್ಸವ ಹಾಗೂ ಮೂವರ್ ದೈವಂಗಳಿಗೆ ನೇಮೋತ್ಸವ ನಡೆಯಲಿದೆ.
ಡಿ.25ರಂದು ಮಲರಾಯ ದೈವದ ನೇಮೋತ್ಸವ ಹಾಗೂ ಕೊರತ್ತಿ, ಗುಳಿಗ ದೈವಗಳ ನೇಮೋತ್ಸವ ಬುಧವಾರದಂದು ಜರುಗಲಿದೆ.
ಬಳಿಕ ಧರ್ಮನಗರ ಬಾಲಗೋಕುಲ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ-ಸಾಹಿತ್ಯ-ವೈವಿದ್ಯ ಕಾರ್ಯಕ್ರಮ, ಜೈದೀಪ್ ಅಮೈ ನೇತೃತ್ವದ ಕಲಾ ತಪಸ್ವಿ ಸಾಂಸ್ಕೃತಿಕ ಕಲಾ ತಂಡದಿಂದ ಮನರಂಜನಾ ಕಾರ್ಯಕ್ರಮ, ವಿದುಷಿ ಅನುರಾಧ ಅಡ್ಕಸ್ಥಳ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಉಮೇಶ್ ಮಿಜಾರ್ ಸಾರಥ್ಯ ಹಾಗೂ ಸಂಭಾಷಣೆ ನಿರ್ದೇಶನದ ಮನಸ್ ಮೈದಾನ್ ತುಳು ಹಾಸ್ಯಮಯ ನಾಟಕ, ವರುಣ್ ಆಚಾರ್ಯ ಬಂಟ್ವಾಳ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ, ಗಡಿನಾಡ ಕನ್ನಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಲ್.ಕೆ. ಧರಣ್ ಮಾಣಿ ಇವರಿಂದ ಶ್ರೀ ಹರಿನಾಮ ಸಂಕೀರ್ತನೆ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ನೃತ್ಯ ಸಂಭ್ರಮ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು ಪುಣ್ಯಕಾರ್ಯದಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧಪ್ರಸಾದವನ್ನು ಸ್ವೀಕರಿಸಿ , ದೈವ ಕೃಪೆಗೆ ಪಾತ್ರರಾಗಬೇಕಾಗಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡೈಮಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.