ಮುರ ಶಿವಸದನದಲ್ಲಿ ದಿವ್ಯಾಂಗಜನ ಸಾಹಿತ್ಯ ಸಂಭ್ರಮ

ಪುತ್ತೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ದಿವ್ಯಾಂಗಜನ ಸಾಹಿತ್ಯ ಸಂಭ್ರಮ ಮುರ ಶಿವಸದನ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಜರಗಿತು.

ವಿಕಲಚೇತನರ ಸುಪ್ತ ಪ್ರತಿಭೆಯನ್ನು‌  ಹಾಗೂ ಸಾಹಿತ್ಯ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಹಾಗೂ ಸೂಕ್ತ ವೇದಿಕೆಯನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮ ಜರಗಿತು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಯುವದ ಜಂಟಿ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ವಿಕಲಚೇತನರ ಸೇವಾ ಕೇಂದ್ರ ಪುತ್ತೂರು ತಾಲೂಕು ಪಂಚಾಯತ್, ಶಿವಸದನ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ ಮುರ, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ಎಂ.ವಿ. ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಪುತ್ತೂರು, ಪುತ್ತೂರು ಕಡಬ ತಾಲೂಕು ವಿವಿದೋದ್ದೇಶ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಸಹಕಾರದಲ್ಲಿ ದಿವ್ಯಾಂಗಜನ ಸಾಹಿತ್ಯ ಸಂಭ್ರಮ ಹಮ್ಮಿಕೊಳ್ಳಲಾಯಿತು.































 
 

ಸಾಧಕ ವಿಶೇಷಚೇತನ ಮಕ್ಕಳಾದ ರಕ್ಷಿತಾ, ರೆಬೆಕಾ, ಹಾಫಿಲ್ ಮಹಮ್ಮದ್ ನಿಯಾಜ್, ಪ್ರದೀಪ್, ಶಶಿಕಲಾ ಬೆಟ್ಟಂಪಾಡಿ ಅವರನ್ನು ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಕಲಾಯಿಗುತ್ತು ಸನ್ಮಾನಿಸಿ, ಗೌರವಿಸಿದರು.

ತಹಸೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಪಂ ಇಓ ನವೀನ್ ಕುಮಾರ್ ಭಂಡಾರಿ, ಬಿಇಓ ಲೊಕೇಶ್ ಎಸ್.ಆರ್., ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು, ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ, ವಿಕಲಚೇತನರ ನೋಡೆಲ್ ಅಧಿಕಾರಿ ವಾಣಿಶ್ರೀ, ಶ್ರೀ ಸುಬ್ರಹ್ಮಣ್ಯ ಸಭಾದ ಅಧ್ಯಕ್ಷೆ ಸುಮಂಗಲಾ ಪ್ರಭಾಕರ್, ಪುನರ್ವಸತಿ ತಾಲೂಕು ಕಾರ್ಯಕರ್ತ ನವೀನ್ ಕುಮಾರ್ ಶುಭಹಾರೈಸಿದರು.

ದಾನಿಗಳ ನೆರವಿನಿಂದ ಭಾಗವಹಿಸಿದ ವಿಶೇಷಚೇತನ ಮಕ್ಕಳಿಗೆ ಹಾಗೂ ಶಿವಸದನ ಆಶ್ರಮಕ್ಕೆ ಬೆಡ್ ಶೀಟ್, ಟೀಶರ್ಟ್, ಶರ್ಟ್ ಮೊದಲಾದ ಉಡುಪುಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತನುಜಾ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಮುಳಿಯ ಸ್ವಾಗತಿಸಿದರು. ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಸುಬ್ರಮಣಿ ಪಿ.ವಿ. ವಂದಿಸಿದರು.

ಕಾರ್ಯಕ್ರಮದ ಪ್ರಾಯೋಜಕರಾಗಿ ಬಿಂದು ಫ್ಯಾಕ್ಟರಿ, ಕ್ಯಾಂಪ್ಕೋ, ಫ್ಲೇವರ್ಸ್ ಐಸ್ ಕ್ರೀಮ್ ಸಹಕರಿಸಿದರು.

ಈ ಸಂದರ್ಭ ಕವಿಗೋಷ್ಠಿ, ಕಥಾ ಗೋಷ್ಠಿ, ಕನ್ನಡ ಗೀತಗಾಯನ, ಪ್ರತಿಭಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನಾ ಆಟೋಟ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top