ಉಪ್ಪಿನಂಗಡಿ : ಕೆಎಸ್‌ಆರ್‌ಟಿಸಿ ಬಸ್ ಚಾಲಕನೋರ್ವ ಕುಡಿದು ಬಸ್ ಚಲಾಯಿಸಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗಿ, ತದ ನಂತರದಲ್ಲಿ ಆಲಂತಾಯದತ್ತ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಮದ್ಯಪಾನ ಸೇವಿಸಿ ಬಸ್ಸನ್ನು ಮನ ಬಂದಂತೆ ಚಲಾಯಿಸಿದ ಪರಿಣಾಮ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಗೊಂಡು ಬೊಬ್ಬೆ ಹಾಕಿದ್ದಾರೆ..
ಬಸ್‌ನಲ್ಲಿದ್ದ ಪ್ರಯಾಣಿಕರ ಕೂಗು ಕೇಳಿ ಸ್ಥಳೀಯ ನಾಗರಿಕರು ಬಸ್‌ನ್ನು ನಿಲ್ಲಿಸಲು ಮುಂದಾಗಿದ್ದಾರೆ. ಬಸ್ ನಿಲ್ಲುತ್ತಿದ್ದಂತೆಯೇ ಚಾಲಕನನ್ನು ಬಸ್‌ನಿಂದ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡ ಬಳಿಕ ಪೊಲೀಸರಿಗೆ ದೂರಿ ನೀಡಿ ಚಾಲಕನನ್ನು ಠಾಣೆಗೆ ಒಪ್ಪಿಸಲಾಗಿದೆ..
ಬಸ್ ಚಾಲಕನ ಅವಾಂತರದಿಂದ ಜೀವ ಭಯಕ್ಕೆ ತುತ್ತಾದ ಪ್ರಯಾಣಿಕರು ಅತಂತ್ರರಾಗುವುದನ್ನು ತಪ್ಪಿಸುವ ಸಲುವಾಗಿ ಬಸ್‌ನ ನಿರ್ವಾಹಕನೇ ಬಸ್ಸನ್ನು ಚಲಾಯಿಸಿದ್ದಾನೆ.