ರೆಸಾರ್ಟ್‌ನೊಳಗೆ 12 ಭಾರತೀಯರು ಶವವಾಗಿ ಪತ್ತೆ

ಕಾರ್ಬನ್‌ ಮೊನೊಕ್ಸೈಡ್‌ ಅನಿಲ ಸೋರಿಕೆಯಿಂದ ಸಾವು ಸಂಭವಿಸಿದ ಶಂಕೆ

ಜಾರ್ಜಿಯಾ: ಜಾರ್ಜಿಯಾದ ಗುಡೌರಿ ಪರ್ವತದ ರೆಸಾರ್ಟ್‌ನ ರೆಸ್ಟೋರೆಂಟ್‌ನಲ್ಲಿ 12 ಭಾರತೀಯ ಪ್ರಜೆಗಳು ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಬನ್ ಮೊನೊಕ್ಸೈಡ್ ವಿಷಾನಿಲದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಜಾರ್ಜಿಯಾ ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ.

ಮೃತರೆಲ್ಲ ಈ ರೆಸಾರ್ಟ್‌ನ ನೌಕರರು. ರಾತ್ರಿ ಕರೆಂಟ್‌ ಹೋದಾಗ ಕೋಣೆಯ ಮೂಲೆಯಲ್ಲಿದ್ದ ಜನರೇಟರ್‌ ಸ್ಟಾರ್ಟ್‌ ಮಾಡಿದ್ದು, ಇದರಿಂದ ಹೊರಸೂಸಿದ ಕಾರ್ಬನ್‌ ಮೊನೊಕ್ಸೈಡ್‌ ಅನಿಲ ಸೇವಿಸಿ ಅವರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ರೆಸಾರ್ಟ್‌ ಮಾಲಕನ ವಿರುದ್ಧ ನಿರುದ್ದೇಶದ ನರಹತ್ಯೆ ಕೇಸ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.































 
 

ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಮೃತ 12 ಮಂದಿ ಭಾರತೀಯ ನಾಗರಿಕರು ಎಂದು ಟಿಬಿಲಿಸಿಯಲ್ಲಿರುವ ಭಾರತೀಯ ಹೈಕಮಿಷನರ್ ಹೇಳಿದ್ದಾರೆ. ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ 12 ವಿದೇಶಿಯರು ಮೃತಪಟ್ಟಿದ್ದಾರೆ. ಮೃತರ ಶವಗಳು ರೆಸ್ಟೋರೆಂಟ್‌ನ ಎರಡನೇ ಮಹಡಿಯಲ್ಲಿರುವ ಮಲಗುವ ಕೋಣೆಗಳಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ.

ಜಾರ್ಜಿಯಾದ ಗುಡೌರಿಯಲ್ಲಿ 12 ಭಾರತೀಯ ಪ್ರಜೆಗಳ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಭಾರತೀಯ ಹೈಕಮಿಷನರ್ ಹೇಳಿಕೆಯಲ್ಲಿ ತಿಳಿಸಿದೆ. ಅಗಲಿದ ಕುಟುಂಬಗಳಿಗೆ ಆಳವಾದ ಸಂತಾಪ. ಪ್ರಾಣ ಕಳೆದುಕೊಂಡ ಭಾರತೀಯ ಪ್ರಜೆಗಳ ಬಗ್ಗೆ ಮಾಹಿತಿ ಪಡೆಯಲು ಹೈಕಮಿಷನರ್ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಹೇಳಿದೆ.

ಪೊಲೀಸರು ಜಾರ್ಜಿಯಾದ ಕ್ರಿಮಿನಲ್ ಕೋಡ್‌ನ ಆರ್ಟಿಕಲ್ 116ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದು, ಇದು ನಿರ್ಲಕ್ಷ್ಯದಿಂದ ಕೊಲೆ ಎಂದು ಉಲ್ಲೇಖಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಮಲಗುವ ಕೋಣೆ ಬಳಿ ಮುಚ್ಚಿದ ಜಾಗದಲ್ಲಿ ವಿದ್ಯುತ್ ಜನರೇಟರ್ ಅನ್ನು ಇರಿಸಲಾಗಿತ್ತು. ಶುಕ್ರವಾರ ರಾತ್ರಿ ವಿದ್ಯುತ್ ಸರಬರಾಜು ಸ್ಥಗಿತಗೊಂಡ ನಂತರ ಅದನ್ನು ಆನ್ ಮಾಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top