1971, ಡಿಸೆಂಬರ್ 16ರಂದು ಭಾರತ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಸೆಣಸಾಡಿ ಗೆಲುವು ಸಾಧಿಸಿ ವಿಜಯದ ಕಹಳೆ ಊದಿದೆ. ಅಂದಿನಿಂದ ಈ ದಿನವನ್ನು ಹೆಮ್ಮೆಯ ದಿನವಾಗಿ ಪರಿಗಣಿಸಿದ್ದು, ಇಡೀ ದೇಶವೇ ಈ ದಿನವನ್ನು ‘ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.
1999ರಲ್ಲಿ ನಡೆದ ಭಾರತ- ಪಾಕಿಸ್ಥಾನ ಯುದ್ದದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಪಾಕಿಸ್ತಾನದ ವಿರುದ್ಧದ ಗೆಲುವನ್ನು ನಮ್ಮ ದೇಶ ಮಹತ್ವದ ದಿನವೆಂದು ಪರಿಗಣಿಸುತ್ತಾರೆ. ಅಂತೆಯೇ ಡಿಸೆಂಬರ್ 16ರಂದು ಕೂಡ ಪಾಕಿಸ್ತಾನದ ವಿರುದ್ಧದ ಗೆಲುವನ್ನು ವಿಜಯ್ ದಿವಸ್ ಎಂದು ಆಚರಿಸುತ್ತಾ ಬರಲಾಗಿದೆ. ಈ ಒಂದು ದಿನವು ಭಾರತೀಯ ಇತಿಹಾಸದಲ್ಲಿ ಅತ್ಯುನ್ನತ ಘಟ್ಟವಾಗಿದ್ದು, ದೇಶವು ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಮೂಲಕ ವಿಜಯ ದಿವಸ್ ಅನ್ನು ಸಂಭ್ರಮಿಸುತ್ತದೆ.
ವಿಜಯ್ ದಿವಸ್ ಇತಿಹಾಸ
1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವು ಡಿಸೆಂಬರ್ 3 ರಂದು ಪ್ರಾರಂಭವಾಗಿ ಸುಮಾರು 13 ದಿನಗಳ ಕಾಲ ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯಿತು. ಆಗಿನ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷಿಕ ಬಹುಸಂಖ್ಯಾತರ ಮೇಲೆ ಉಂಟಾದ ಮಾನವೀಯ ಬಿಕ್ಕಟ್ಟಿನಿಂದಾಗಿ ಯುದ್ಧ ಪ್ರಾರಂಭವಾಯಿತು ಈ ಪ್ರದೇಶದ ನಾಗರಿಕರ ವಿರುದ್ಧ ಪಾಕಿಸ್ತಾನಿ ಸೇನೆ ದರ್ಪ ಆರಂಭಿಸಿತ್ತು. ಗಂಭೀರ ದಾಳಿಗಳ ಪರಿಣಾಮವಾಗಿ ಅಸಂಖ್ಯಾತ ಬಾಂಗ್ಲಾದೇಶೀಯರು ಗಡಿ ದಾಟಿ ಭಾರತಕ್ಕೆ ಬರಲು ಆರಂಭಿಸಿದರು. ಆಗ ಅನಿವಾರ್ಯವಾಗಿ ಭಾರತ ಮಧ್ಯ ಪ್ರವೇಶಿಸಿ ಯುದ್ಧ ಮಾಡಬೇಕಾಯಿತು.
ಡಿಸೆಂಬರ್ 16, 1971 ರಂದು ಪಾಕಿಸ್ತಾನಿ ಸೇನೆಯ ಮಹಾ ದಂಡನಾಯರ ಅಬ್ದುಲ್ಲಾ ಖಾನ್ ನಿಯಾಜಿ, ಪಾಕಿಸ್ತಾನಿ ಪಡೆಗಳ ಕಮಾಂಡರ್, ಭಾರತ ಮತ್ತು ಬಾಂಗ್ಲಾದೇಶದ ಮುಕ್ತಿ ಬಾಹಿನಿಯ ಸಂಯೋಚಿತ ಪಡೆಗಳಿಗೆ ಔಪಚಾರಿಕವಾಗಿ ಶರಣಾದರು. ಇವರೊಟ್ಟಿಗೆ ಸುಮಾರು 93,000 ಪಾಕಿಸ್ತಾನಿ ಪಡೆಗಳು ಕೂಡ ಶರಣಾದವು. ಇತಿಹಾಸದಲ್ಲೇ ಇದು ವಿಶ್ವ ಸಮರ 2 ರ ನಂತರದ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದೆ. 1971ರ ಯುದ್ಧದ ಗೆಲುವು ಬಾಂಗ್ಲಾದೇಶದ ಉದಯಕ್ಕೂ ಕಾರಣವಾಯಿತು. ಜೊತೆಗೆ ಭಾರತದ ನಾಯಕತ್ವಕ್ಕೆ ಭದ್ರ ಬುನಾದಿ ಹಾಕಿತ್ತು. ಈ ಒಂದು ಯುದ್ಧದ ಸಾವು-ನೋವುಗಳಲ್ಲಿ ಸುಮಾರು 3,900 ಭಾರತೀಯ ಸೈನಿಕರು ವೀರ ಮರಣ ಹೊಂದಿದರು ಮತ್ತು ನೂರಾರು ಮಂದಿ ಗಾಯಗೊಂಡಿದ್ದರು.
ವಿಜಯ್ ದಿವಸ್ ಮಹತ್ವ
ತ್ಯಾಗದ ಸ್ಮರಣೆ: ಇದು ಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗದ ನೆನಪಿಗಾಗಿ ಆಚರಿಸುವ ಹೆಮ್ಮೆಯ ಮತ್ತು ಗೌರವಾರ್ಥ ದಿನ.
ಸ್ವಾತಂತ್ರ್ಯದ ಸಂಕೇತ: ಈ ದಿನವು ಬಾಂಗ್ಲಾದೇಶದಲ್ಲಿ ಪಾಕಿಸ್ತಾನಿ ಸೇನೆಯ ದಬ್ಬಾಳಿಕೆಯನ್ನು ಅಂತ್ಯಗೊಳಿಸಿತು ಮತ್ತು ಸ್ವಾತಂತ್ರ್ಯ ನೀಡಿತು.
ರಾಷ್ಟ್ರೀಯ ಹೆಮ್ಮೆ: ವಿಜಯ್ ದಿವಸ್ ಏಕತೆಯನ್ನು ಸೃಷ್ಟಿಸುತ್ತದೆ ಮತ್ತು ನಾಗರಿಕರಲ್ಲಿ ದೇಶಭಕ್ತಿಯ ಪ್ರಜ್ಞೆಯನ್ನು ಬೆಳಸುತ್ತದೆ, ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಮಹತ್ವವನ್ನು ನೆನಪಿಸುತ್ತದೆ.