ಪುತ್ತೂರು : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಯುವ ಘಟಕ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶಾಂತಿಗೋಡು ಗ್ರಾಮದ ಹೊಸ ಮನೆ ಮೇದಪ್ಪ ಗೌಡರ ಮನೆಯಲ್ಲಿ ಆರು ಜೊತೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವು ಡಿ.15 ರಂದು ನಡೆಯಿತು.
ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಮಾತನಾಡಿ ದಾಂಪತ್ಯ ಜೀವನದ ಪ್ರತಿ ಹೆಜ್ಜೆಯಲ್ಲೂ ಒಂದಾಗಿ ಸಾಗಿದ ಈ ದಂಪತಿಗಳು ಸಮಾಜಕ್ಕೆ ಮಾದರಿ, ಇವರನ್ನು ಇಂದು ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯಾಗಿದೆ ಎಂದರು. ಕಾರ್ಯಕ್ರಮವನ್ನು ಹಿರಿಯರಾದ ರಾಮಕ್ಕ ರವರು ಉದ್ಘಾಟಿಸಿದರು.
ಒಕ್ಕೂಟದ ಅಧ್ಯಕ್ಷರಾದ ಜಯಂತಿ ಗಂಡಿ ಮನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸವಣೂರು ವಲಯದ ನಿರ್ದೇಶಕರಾದ ವಸಂತ ವೀರಮಂಗಲರವರು ಇತಿಹಾಸ ಓದುವ ವ್ಯಕ್ತಿಗಳಾಗದೆ ಇತಿಹಾಸ ನಿರ್ಮಿಸುವ ವ್ಯಕ್ತಿಗಳಾಗಬೇಕು ಎಂದರು.
ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಮಹಿಳಾ ಅಧ್ಯಕ್ಷರಾದ ವಾರಿಜ ಬೆಳಿಯಪ್ಪ ಗೌಡ, ಮುಂಡೂರು ವಲಯದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಮುಂಗ್ಲಿಮನೆ, ಗ್ರಾಮ ಸಮಿತಿಯ ಅಧ್ಯಕ್ಷರಾದ ಬೆಳಿಯಪ್ಪ ಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ಭಾರತಿ ಕಾಡ ಮನೆ ಶುಭ ಹಾರೈಸಿದರು.
ದಾಂಪತ್ಯ ಜೀವನದ 50 ವರ್ಷ ಪೂರೈಸಿದ ದಂಪತಿಗಳಾದ ದಾಸಪ್ಪ ಗೌಡ ಮತ್ತು ಸೀತಾ ನಿರುಕ್ಕುತ್ತಡಿ, ಎಲ್ಯಣ್ಣ ಗೌಡ ಮತ್ತು ಚಂದ್ರಾವತಿ ಮಾಯಿಲೇಶ್ವರ , ಜಿನ್ನಪ್ಪ ಗೌಡ ಮತ್ತು ಜಾನಕಿ ಡೆಬ್ಬೇಲಿ , ಸೇಸಪ್ಪ ಗೌಡ ಮತ್ತು ಕುಸುಮ ಹೊಸೊಕ್ಲು , ಕೂಸಪ್ಪ ಗೌಡ ಮತ್ತು ಹೇಮಾವತಿ ಸುಲಿಮೇಲು, ನಾರಾಯಣ ಗೌಡ ಮತ್ತು ಜಯಂತಿ ಗಾಂಧಿ ಮನೆ ದಂಪತಿಗಳನ್ನು ಸನ್ಮಾನಿಸಲಾಯಿತು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯದರ್ಶಿ ಜಿನಿತ್ ಸ್ವಾಗತಿಸಿ, ಪ್ರೇರಕಿ ಹೇಮಲತಾರವರು ಪರಿಚಯ ಪತ್ರ ವಾಚಿಸಿದರು. ಮೇದಪ್ಪ ಗೌಡ ವೀಳ್ಯ ನೀಡಿ ಅತಿಥಿಗಳನ್ನು ಬರಮಾಡಿಕೊಂಡರು. ನಿಕಟಪೂರ್ವ ಅಧ್ಯಕ್ಷ ಹರ್ಷ ಗುತ್ತು ಧನ್ಯವಾದಗೈದರು. ಮೇಲ್ವಿಚಾರಕರಾದ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.