ಪುತ್ತೂರು : ನರಿಮೊಗರು ಗ್ರಾಮದ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನೂತನ ನಾಗನಕಟ್ಟೆಗೆ ಭೂಮಿ ಪೂಜೆ ಗುರುವಾರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪೂಜೆಯ ಅಂಗವಾಗಿ ಬೆಳಿಗ್ಗೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗರ್ಭಗುಡಿ ಎದುರು ಪ್ರಾರ್ಥನೆ ನೆರೆವೇರಿಸಲಾಯಿತು. ಬಳಿಕ ನಾಗನಕಟ್ಟೆ ನಿರ್ಮಾಣ ಸ್ಥಳದ ಬಳಿ ತೆರಳಿ ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ಭೂಮಿ ಪೂಜೆಯನ್ನು ಲಕ್ಷ್ಮೀಶ ಪುತ್ತೂರಾಯ ನೆರವೇರಿಸಿದರು. ತಂತ್ರಿ ಶ್ರೀಪತಿ ಭಟ್, ಅರ್ಚಕ ರಮೇಶ್ ಬೈಪಡಿತ್ತಾಯ ವೈದಿಕ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ, ಸಮಿತಿ ಸದಸ್ಯರಾದ ಜನಾರ್ದನ ಜೋಯಿಸ ಕುತ್ತಿಗದ್ದೆ, ವೇದಾವತಿ ಬಾಲಪ್ಪ ಗೌಡ ಕಿದ್ಕಾರ್, ಸಂಧ್ಯಾ ಗಣೇಶ್ ಸಾಲಿಯಾನ್ ಕೈಪಂಗಳ ದೋಳ, ಜಾಗ ದಾನ ಮಾಡಿದ ವಾರಿಜ ಆಚಾರ್ಯ, ಪ್ರವೀಣ್ ಆಚಾರ್ಯ, ಪ್ರದೀಪ್ ಆಚಾ ನರಿಮೊಗರು ಗ್ರಾಪಂ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ, ತಾಪಂ ಮಾಜಿ ಸದಸ್ಯೆ ಯಶೋಧ ಜಗದೀಶ್ ಭಂಡಾರಿ, ವೇದನಾಥ ಸುವರ್ಣ , ರವೀಂದ್ರ ರೈ ನೆಕ್ಕಿಲು,ಸುರೇಶ್ ಕಣ್ಣಾರಾಯ, ವಾಸು ಪೂಜಾರಿ, ಉಮೇಶ್ ಇಂದಿರಾನಗರ, ವಾಸು ಪೂಜಾರಿ, ಪ್ರಭಾಕರ ಸಾಲ್ಯಾನ್,ಗಣೇಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ಮತ್ತಿತರರು ಉಪಸ್ಥಿತರಿದ್ದರು.