ಪುತ್ತೂರು: ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಟ್ವಾಳ ಪೊಲೀಸರು ಮುಂಬೈಯಲ್ಲಿ ಬಂಧಿಸಿದ ಘಟನೆ ನಡೆದಿದೆ.
ಆರ್ಯಪು ಗ್ರಾಮದ ಸಂಪ್ಯ ನಿವಾಸಿ ಅಬ್ದುಲ್ ಅಜೀಜ್ ಬಂಧಿತ ಆರೋಪಿ
ಬಂಟ್ವಾಳ ಉಪವಿಭಾಗದ ಪೋಲಿಸ್ ಉಪಾಧಿಕ್ಷಕ ವಿಜಯಪ್ರಸಾದ ಅವರ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಕಲೈ ಮಾರ್, ದುರ್ಗಪ್ಪ, ಗೋಪಾಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ASI ಸುಜು ಹಾಗೂ HC ಜಗದೀಶ್ ರವರು ಮಾಹಿತಿ ಸಂಗ್ರಹಿಸಿ ಮಹಾರಾಷ್ಟ್ರ ರಾಜ್ಯದ ಮುಂಬಯಿ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿ ಅಬ್ದುಲ್ ಅಜೀಜ್ ನನ್ನು ಶುಕ್ರವಾರ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.