ಪುತ್ತೂರು : ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ಇರುವ ಶ್ರೀಗುರುದತ್ತಾತ್ರೇಯ ಪೀಠದಲ್ಲಿ ನಡೆಯುವ ದತ್ತಜಯಂತಿ 2024ರ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ಇಂದು ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲು ಇಲ್ಲಿ ದತ್ತಹೋಮ ನಡೆಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ನಗರ ಪ್ರಖಂಡ ಅಧ್ಯಕ್ಷರಾದ ದಾಮೋದರ ಪಾಟಾಳಿ, ನಗರ ಪ್ರಖಂಡ ಕಾರ್ಯದರ್ಶಿ ಜಿತೇಶ್ ಬಲ್ನಾಡ್, ನಗರ ಪ್ರಖಂಡ ಬಜರಂಗದಳ ಸಂಯೋಜಕ್ ಜಯಂತ್ ಕುಂಜೂರು ಪಂಜ, ಸಹ ಸಂಯೋಜಕ್ ಪ್ರವೀಣ್ ಕಲ್ಲೇಗ, ಜೀವನ್ ಬಲ್ನಾಡ್. ಕೇಶವ್, ಜಗದೀಶ್ ನಿರ್ಪಾಜೆ, ಧನರಾಜ್ ಬೆಳ್ಳಿಪ್ಪಾಡಿ ಮತ್ತು ದತ್ತಮಾಲಧಾರಿಗಳು ಉಪಸ್ಥಿತರಿದ್ದರು.