ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ಡಿ.27 ಹಾಗೂ 29 ರಂದು ನಡೆಯುವ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿಗೆ ವಿಶ್ರಾಂತ ಪ್ರಾದ್ಯಾಪಕ ಡಾ. ವಿಘ್ನೇಶ್ವರ ವರ್ಮುಡಿ ಆಯ್ಕೆಯಾಗಿದ್ದಾರೆ.
1986 ರಿಂದ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬಗ್ಗೆ ಬರೆದ ಸಾವಿರಕ್ಕೂ ಮಿಕ್ಕಿದ ಸಂಶೋಧನಾತ್ಮಕ ಲೇಖನಗಳು ಮತ್ತು ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಬರೆದ 50 ಕ್ಕೂ ಅಧಿಕ ಪುಸ್ತಕಗಳು ಮತ್ತು ಅಡಕೆ ಮಾರುಕಟ್ಟೆ ಬಗ್ಗೆ ನಡೆಸಿದ ಸಂಶೋಧನೆಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ.27ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
15 ಪರಾಮರ್ಶನ ಗ್ರಂಥಗಳು ಭಾರತ ಸೇರಿ ಅಮೇರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಹಾಲೆಂಡ್ ರಾಷ್ಟ್ರಗಳ ವಿಶ್ವವಿದ್ಯಾಲಯದ ಪರಾಮರ್ಶನ ಗ್ರಂಥಗಳಾಗಿದೆ. ೫ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಅಡಕೆ ವಿಚಾರದಲ್ಲಿ ನಾಲ್ಕು ಸಂಶೊಧನಾತ್ಮಕ ವರದಿಯನ್ನು ಪ್ರಕಟಿಸಿದ್ದು, ಎರಡು ಅನುಷ್ಠಾನಗೊಂಡರೆ, ಇನ್ನೆರಡಕ್ಕೆ ಪರಿಹಾರ ಲಭಿಸಿದೆ.