ಉಪ್ಪಿನಂಗಡಿ: ಕೀಟನಾಶಕ ಸೇವಿಸಿದ ವಯೋವೃದ್ಧರೋರ್ವರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಪಿಲಿಕೂಡೇಲುನಲ್ಲಿ ನಡೆದಿದೆ.
ವಯೋಸಹಜ ಕಾಯಿಲೆ ಮತ್ತು ಮರೆಗುಳಿತನದಿಂದ ಬಳಲುತ್ತಿದ್ದ ಪದ್ಮನಾಭ ಭಟ್ ಡಿ.4 ರಂದು ಮನೆಯಲ್ಲಿ ಮಗನಿಲ್ಲದ ವೇಳೆ , ತೋಟಕ್ಕೆ ಸಿಂಪಡಿಸಿ ಉಳಿದಿದ್ದ ಕ್ರಿಮಿನಾಶಕವನ್ನು, ಔಷಧಿ ಎಂದು ತಿಳಿದು ಸೇವಿಸಿದ ಕಾರಣ ಅಸ್ವಸ್ಥಕ್ಕೆ ತುತ್ತಾಗಿದ್ದಾರೆ.
ಅವರನ್ನು ಕೂಡಲೆ ಆಸ್ಪತ್ರೆಗೆ ಕರೆದೊಯಿದರು ಚಿಕಿತ್ಸೆಗೆ ಸ್ಪಂದಿಸದೆ ಅದಿತ್ಯವಾರದಂದು ನಿಧನರಾದರು ಎಂದು ಅವರ ಮಗ ಕೇಶವ ಪ್ರಸಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.