ವಿವೇಕಾನಂದ ಶಿಶುಮಂದಿರದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯ ಆರಂಭ

ಪುತ್ತೂರು: ಪುತ್ತೂರು ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದಲ್ಲಿ ದೇವಾಲಯಗಳ ಸಂವರ್ಧನ ಸಮಿತಿ ವತಿಯಿಂದ  ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯನ್ನು, ಶುಕ್ರವಾರ ಆರಂಭಿಸಲಾಯಿತು

ಕೃಷ್ಣವೇಣಿ ಪ್ರಸಾದ್ ಮುಳಿಯ ಹಿಂದೂ ಧಾರ್ಮಿಕ ಶಿಕ್ಷಣದ ಉದ್ದೇಶ ಮತ್ತು ಅದರ ವಿಶೇಷತೆಗಳನ್ನು ತಿಳಿಸಿದರು. ಬಳಿಕ ಶ್ಲೋಕವೊಂದರ ಅರ್ಥ, ದೈನಂದಿನ ಜೀವನದಲ್ಲಿ ಆಚಾರ – ವಿಚಾರಗಳು ವೈಜ್ಞಾನಿಕ ತಳಹದಿ ಮೇಲೆ  ಪರಂಪರಾಗತವಾಗಿ ಹೇಗೆ ರೂಪುಗೊಂಡಿವೆ ಎಂಬುದನ್ನು ವಿವರಿಸಿ, ಭಜನೆ ನಡೆಸಿಕೊಟ್ಟರು.

ಶಂಕರಿ ಶರ್ಮ ಕನ್ನಡದ ಭಗವದ್ಗೀತೆ ಎನಿಸಿಕೊಂಡಿರುವ ಡಿ.ವಿ.ಜಿ.ಯವರ ಕಗ್ಗವೊಂದನ್ನು ಪ್ರಸ್ತುತಪಡಿಸಿದರು. ಮುಂದೆ, ಅದರ ಅರ್ಥವನ್ನು ವಿವರಿಸುತ್ತಾ ಇಂದಿನ ಕಾಲಘಟ್ಟದಲ್ಲಿ ಅದರ ಅಗತ್ಯತೆಯನ್ನು ತಿಳಿಸಿದರು. ಬಳಿಕ ಪೌರಾಣಿಕ ಕಥೆಯೊಂದನ್ನು ಹೇಳಿ, ಅದರ ವಿಶೇಷತೆಯನ್ನು ವಿವರಿಸಿದರು.































 
 

ಶಿಶುಮಂದಿರದ ಆಡಳಿತ ಮಂಡಳಿ ಕೋಶಾಧಿಕಾರಿ ಚಂದ್ರಪ್ರಭಾ ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು.

ಮಾತೃಭಾರತಿ ಸದಸ್ಯೆಯರಾದ ಲಕ್ಷ್ಮೀಪ್ರಭ ಸ್ವಾಗತಿಸಿ, ರಮ್ಯ ವಂದಿಸಿದರು. ಮುಖ್ಯ ಮಾತಾಜಿ ರೇಖಾ, ಮಾತಾಜಿಯವರಾದ  ಹರ್ಷಿತಾ, ದಿವ್ಯ, ಪದ್ಮಪ್ರಿಯ,  ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top