ಪುತ್ತೂರು: ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಾಗೂ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಶ್ರೀರಾಮ ಸಭಾಭವನದಲ್ಲಿ ‘ವಿದ್ಯಾಸ್ಫೂರ್ತಿ – 2024’ ನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ, ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ, ಎಷ್ಟು ಸಂಸ್ಕಾರ ಎನ್ನುವುದು ಯೋಚನೆ ಮತ್ತು ಯೋಜನೆಗಳಲ್ಲಿ ಕಾರ್ಯಗತವಾಗಬೇಕು. ವಿದ್ಯಾಸ್ಪೂರ್ತಿಯಂತಹ ಕಾರ್ಯಕ್ರಮಮ ಬಹು ವಿಧದ ಚಿಂತನೆಯಲ್ಲಿ ಸಹಕರಿಸುತ್ತದೆ ಎಂದುಹೇಳಿದರು.
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ಟಿ. ಸುಬ್ರಹ್ಮಣ್ಯ ಭಟ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ರಾವ್, ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಶ್ರೀಶ ಭಟ್ ಉಪಸ್ಥಿತರಿದ್ದರು.
ವಿದ್ಯಾಸ್ಫೂರ್ತಿ-2024 ರ ಭಾಗವಾಗಿ ರಸಪ್ರಶ್ನೆ, ವಿಜ್ಞಾನ ರಂಗೋಲಿ, ಸ್ಪೆಲ್ಲ್ಬೀ, ಆಶು ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳು ನಡೆದವು. ವಿವಿಧ ಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶಾಲಾ ಶಿಕ್ಷಕರಿಗಾಗಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು.
ಪಾಲ್ಗೊಂಡ ಶಿಕ್ಷಕರಿಗೆ, ವಿದ್ಯಾರ್ಥಿಗಳಿ ಪ್ರಶಂಸಾಪತ್ರ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.