ಪುತ್ತೂರು: ನೇತ್ರಾವತಿ ಗ್ರಾಮೀಣ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಕ್ಯಾಶಿಯರ್ ಆಗಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಪತಿ ಹೆಬ್ಬಾರ್ ಅವರಿಗೆ ಪುತ್ತೂರಿನ ಪ್ರಭು ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಬೀಳ್ಕೊಡುಗೆ ಸಮಾರಂಭ ಶನಿವಾರ ಸಂಜೆ ನಡೆಯಿತು.
ಸಮಾರಂಭದಲ್ಲಿ ಶ್ರೀಪತಿ ಹೆಬ್ಬಾರ್ ದಂಪತಿಯನ್ನು ಪೇಟ ತೊಡಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನೇತ್ರಾವತಿ ಗ್ರಾಮೀಣ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಗಿರಿಧರ ಅಂಬೆಕಲ್ಲು, ಬ್ಯಾಂಕ್ ನ ಕೆ.ಟಿ.ಭಟ್, ಜಯರಾಮ, ಪ್ರಶಾಂತ್ ಪೈ ರಾಮಚಂದ್ರ, ಶ್ರೀಪತಿ ಭಟ್ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಶ್ರೀಪತಿ ಹೆಬ್ಬಾರರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಶ್ರೀಪತಿ ಭಟ್ ಅವರ ಪತ್ನಿ ವಿದ್ಯಾ, ಪುತ್ರಿ ದೀಕ್ಷಿತಾ ಹೆಬ್ಬಾರ್ ಉಪಸ್ಥಿತರಿದ್ದರು.
ಶ್ರೀಪತಿ ಭಟ್ ಅವರು ಮಂಗಳೂರು ಪ್ರಧಾನ ಕಚೇರಿ, ಕಾಶಿಪಟ್ನ, , ಪುತ್ತೂರು, ಬಿ.ಸಿ.ರೋಡು, ಹೊಸ್ಮಾರು, ಸುಬ್ರಹ್ಮಣ್ಯ, ಬೆಳ್ಳಾರೆ, , ಉಪ್ಪಿನಂಗಡಿ ಶಾಖೆಗಳಲ್ಲಿ ಒಟ್ಟು 39 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿರುತ್ತಾರೆ.
ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಶಾಖಾಧಿಕಾರಿ ಗಣೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ವರುಣ್, ವಿನೋದ್ ಆಚಾರ್ಯ, ಸುಕುಮಾರ್ ಪಿ. ಉಪಸ್ಥಿತರಿದ್ದರು.