ಸವಣೂರು: ಸುಳ್ಯ ಮಂಡಲದ ಕುಟ್ರುಪ್ಪಾಡಿ ಮಹಾ ಶಕ್ತಿ ಕೇಂದ್ರ, ಸವಣೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 65 ರ ಸವಣೂರು ಯುವ ಸಭಾ ಭವನದಲ್ಲಿ ಸಂಘಟನಾ ಪರ್ವ ಕಾರ್ಯ ಚಟುವಟಿಕೆಯ ಅಂಗವಾಗಿ ಬೂತ್ ಸಮಿತಿ ಸಭೆ ನಡೆಯಿತು.
ಪಕ್ಷದ ಸೂಚನೆಯ0ತೆ 12 ಜನರ ಬೂತ್ ಸಮಿತಿಯಲ್ಲಿ ಮೂವರು ಮಹಿಳೆಯರು ಮನ್ ಕೀ ಬಾತ್ ಪ್ರಮುಕ್, ಸೋಶಿಯಲ್ ಮಿಡಿಯಾ ಪ್ರಮುಖ್, ಲಾಭಾರ್ಥಿ ಪ್ರಮುಖ್ ರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಸದಸ್ಯತನ, ಮತದಾರರ ಪಟ್ಟಿಗೆ ಸೇರ್ಪಡೆ ಕುರಿತಾದ ವಿಚಾರಗಳ ಕುರಿತಾಗಿ ಚರ್ಚಿಸಲಾಯಿತು…
ಸಂಘಟನಾ ಪರ್ವದ ಸವಣೂರು ಶಕ್ತಿ ಕೇಂದ್ರದ ಪ್ರಭಾರಿ ಸುಳ್ಯ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ. ಕೆ.ಉಪಸ್ಥಿತರಿದ್ದು, ಮಂಡಲ ಸಮಿತಿ ಸದಸ್ಯರಾದ ತಾರಾನಾಥ ಕಾಯರ್ಗ, ಸವಣೂರು ಶಕ್ತಿ ಕೇಂದ್ರದ ಪ್ರಮುಖ್ ಚೇತನ್ ಕುಮಾರ್ ಕೋಡಿಬೈಲ್, 65 ರ ಬೂತ್ ಕಾರ್ಯದರ್ಶಿ ಸತೀಶ್ ಬಲ್ಯಾಯ, ಓ ಬಿ ಸಿ ಮೋರ್ಚಾ ಸದಸ್ಯರಾದ ಚಂದ್ರವತಿ ಸುಣ್ಣಾಜೆ, ಸಿ. ಎ ಬ್ಯಾಂಕ್ ನಿರ್ದೇಶಕರಾದ ಅಶ್ವಿನ್ ಎಲ್ ಶೆಟ್ಟಿ ಹಾಲು ಸೊಸೈಟಿ ನಿರ್ದೇಶಕರುಗಳಾದ ಪದ್ಮಯ್ಯ ಗೌಡ ತುಳಸಿಪುರ ಗಂಗಾಧರ್ ಸುಣ್ಣಾಜೆ, ಪಂಚಾಯತ್ ಸದಸ್ಯರುಗಳಾದ ರಾಜೀವಿ ವಿ ಶೆಟ್ಟಿ ಇಂಡಿಯಾ ಬೇರಿಕೆ ಮಾಜಿ ಸದಸ್ಯರಾದ ಗಾಯತ್ರಿ ಬರಮೇಲು, ಪಕ್ಷದ ಪ್ರಮುಖರಾದ ಪ್ರಕಾಶಚಂದ್ರ ರೈ ಮುಗೇರಗುತ್ತು, ಸುಪ್ರೀತ್ ರೈ ಖಂಡಿಗ, ಸುರೇಶ್ ರೈ ಸೂಡಿಮುಳ್ಳು ಶೇಷಪ್ಪ ನಾಯ್ಕ ಕನ್ನಡಕುಮೇರು, ಅನಿತಾ ಲಕ್ಷ್ಮಣ ಬೇರಿಕೆ, ವೇದಾವತಿ ಬೇರಿಕೆ, ಉಮೇಶ್ ಆಚಾರ್ಯ ಅಟ್ಟೋಲೆ, ರಾಮಕೃಷ್ಣ ಪ್ರಭು, ಪ್ರಕಾಶ್ ಮಾಲೆತ್ತರು, ಜಗದೀಶ್ ಕೆಡೆಂಜಿ, ಚಂದ್ರಶೇಖರ ಮೆದು, ಹಿತೇಶ್ ಮೆದು, ದಯಾನಂದ ಮೆದು, ರುಕ್ಮಯ್ಯ ಗೌಡ ಉಪಸ್ಥಿತರಿದ್ದರು.