ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಮತ್ತು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಸಹಯೋಗದೊಂದಿಗೆ ಮಕ್ಕಳ ಮಾಸೋತ್ಸವ ಅಂಗವಾಗಿ ಫ಼ೋಕ್ಸೋ ಮತ್ತು ಮೊಬೈಲ್ ಬಳಕೆ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಕ್ರಮ ಕಬಕ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆಯಿತು.
ಪತ್ರಕರ್ತ ಸಂಶುದ್ದೀನ್ ಸಂಪ್ಯ ವಿದ್ಯಾರ್ಥಿಗಳೊಂದಿಗೆ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಫ಼ೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿ 18ವರ್ಷದ ಒಳಗಿನ ಯಾವುದೇ ಮಕ್ಕಳಿಗೆ ದೈಹಿಕ, ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುವುದು ಅಪರಾಧವಾಗಿದೆ ಎಂದರು,
ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅದ್ಯಕ್ಷ ರಫೀಕ್ ದರ್ಬೆ ಮಾತನಾಡಿ, ನಾಯಕತ್ವ ಬೆಳೆಸಿ ಕೊಳ್ಳುವ ಬಗ್ಗೆ ಮತ್ತು ಇಂದಿನ ಬೆಳವಣಿಗೆಯ ಸಂದರ್ಭದಲ್ಲಿ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕಾದ ಶಿಸ್ತು, ಸ೦ಯಮತೆ, ದೂರದ್ರಷ್ಟಿ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಕ ಕ್ರಷ್ಣಯ್ಯ.ಕೆ, ಅಥಿತಿ ಶಿಕ್ಷಕಿ ಸ್ವಪ್ನಾ, ಪ್ರ ಶಿಕ್ಷಣಾರ್ಥಿಗಳಾದ ದಿವ್ಯಶ್ರೀ, ಶಿವ ಪ್ರಿಯಾ ಉಪಸ್ತಿತರಿದ್ದರು ಜಿಲ್ಲಾ ಶಿಕ್ಷಣ ಒಕ್ಕೂಟದ ಕಾರ್ಯದರ್ಶಿ ನಯನಾ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಈ ಸಂದರ್ಭದಲ್ಲಿ ಮಕ್ಕಳ ಮಾಸೋತ್ಸವದ ಪ್ರಯುಕ್ತ ಮಕ್ಕಳ ಹಕ್ಕುಗಳ ಬಗ್ಗೆ ಜಾಥಾ ನಡೆಸಲಾಯಿತು, ಶಿಕ್ಷಕಿ ಶಾಂತಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸುಮಿತ್ರಾ ವಂದಿಸಿದರು.