ಭಾರತದಲ್ಲಿ ಈ ಘಟನೆ ಸಂಭವಿಸಿದ್ದರೆ ಏನಾಗುತ್ತಿತ್ತು ಎಂದು ಕೇಳಿದ ನೆಟ್ಟಿಗರು
ಇಸ್ಲಮಾಬಾದ್: ಇಸ್ಲಾಮಾಬಾದ್‌ನ ಡೆಮಾಕ್ರಸಿ ಚೌಕ್‌ನಲ್ಲಿ (ಡಿ ಚೌಕ್) ಇಮ್ರಾನ್ ಖಾನ್ ಬೆಂಬಲಿಗ ಪ್ರತಿಭಟನೆಕಾರರನ್ನು ತಡೆಯಲು ಪೊಲೀಸರು ರಸ್ತೆಗಡ್ಡವಾಗಿ ಇಟ್ಟಿದ್ದ ಕಂಟೈನರ್‌ಗಳ ಮೇಲೇರಿ ನಮಾಜು ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಕೆಳಗೆಸೆದು ಕೊಂದ ವೀಡಿಯೊ ತುಣುಕೊಂದು ಭಾರತದಲ್ಲಿ ಭಾರಿ ವೈರಲ್ ಆಗಿದೆ. ಅನೇಕ ಮಂದಿ ಈ ವೀಡಿಯೊವನ್ನು ನೋಡಿ ಎಲ್ಲಾದರೂ ಭಾರತದಲ್ಲಿ ಈ ಘಟನೆ ನಡೆದಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮರ ರಕ್ಷಕ ಎಂದು ಹೇಳಿಕೊಳ್ಳುತ್ತಿರುವ, ಭಾರತದಲ್ಲಿ ಮುಸ್ಲಿಮರಿಗೆ ಇರುವೆ ಕಚ್ಚಿದರೂ ವಿಶ್ವಸಂಸ್ಥೆ ತನಕ ದೂರು ಕೊಂಡೊಯ್ಯುವ ಪಾಕಿಸ್ಥಾನದಲ್ಲೇ ಮುಸ್ಲಿಮರಿಗೆ ರಕ್ಷಣೆ ಇಲ್ಲ. ಆದರೂ ಜಗತ್ತಿನ ಯಾವುದೇ ಸಂಘಟನೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಇಂಥ ಘಟನೆ ಎಲ್ಲಾದರೂ ಭಾರತದಲ್ಲಿ ನಡೆದಿರುತ್ತಿದ್ದರೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಇಲ್ಲಿರುವ ಮಾನವ ಹಕ್ಕಿನವರು, ಜಾತ್ಯಾತೀತರು, ಲಿಬರಲ್‌ಗಳು, ಮುಸ್ಲಿಮ್ ಸಂಘಟನೆಗಳು ಪುಂಖಾನುಪುಂಖವಾಗಿ ಹೇಳಿಕೆಗಳನ್ನು ನೀಡುತ್ತಿದ್ದವು. ಜನರು ಬೀದಿಗಿಳಿದು ಕಿಚ್ಚಿಕ್ಕಲು, ಕಲ್ಲೆಸೆಯಲು ತೊಡಗುತ್ತಿದ್ದರು. ಆದರೆ ಪಾಕಿಸ್ಥಾನದಲ್ಲಾಗಿರುವ ಕಾರಣ ಎಲ್ಲವೂ ಗಪ್‌ಚುಪ್ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಡಿ ಚೌಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ನಮಾಜ್ ಮಾಡಲು ಕಂಟೈನರ್ ಮೇಲೇರಿದ್ದನು. ಇದನ್ನು ಗಮನಿಸಿದ ಪಾಕಿಸ್ಥಾನಿ ರೇಂಜರ್‌ಗಳು ಆತನನ್ನು ಮೇಲಿಂದ ಕೆಳಕ್ಕೆ ಎಸೆದಿದ್ದಾರೆ. ನೆಲಕ್ಕೆ ಬಿದ್ದ ಪೆಟ್ಟಿಗೆ ಆತ ಸತ್ತಿದ್ದಾನೆ. ಆದರೆ ಈ ಕೃತ್ಯದ ಬಗ್ಗೆ ಧಾರ್ಮಿಕ ಮುಖಂಡರು ಮತ್ತು ಸಂಘಟನೆಗಳು ಮೌನ ವಹಿಸಿವೆ. ಇದೇ ಕೃತ್ಯ ಭಾರತದಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿತ್ತು.
ಪಾಕಿಸ್ತಾನ ತಾನು ಮುಸ್ಲಿಮರ ದೊಡ್ಡ ನಾಯಕ ಎಂದು ಪ್ರಪಂಚದಾದ್ಯಂತ ಪ್ರಚಾರ ಮಾಡಿಕೊಳ್ಳುತ್ತಿದೆ. ಮುಸ್ಲಿಮರು ಎಲ್ಲಿಯಾದರೂ ಹಿಂಸಿಸಲ್ಪಟ್ಟರೆ ಪಾಕಿಸ್ಥಾನ ಮುಸ್ಲಿಮರೊಂದಿಗೆ ನಿಲ್ಲುತ್ತದೆ. ಭಾರತದಲ್ಲಿ ಇರುವ ಮುಸ್ಲಿಂ ಸಂಘಟನೆಗಳು ಕೂಡ ಪಾಕಿಸ್ಥಾನದ ಈ ಘಟನೆಯನ್ನು ವಿರೋಧಿಸಿಲ್ಲ. ಆದರೆ ಭಾರತದಲ್ಲಿ ಇಂತಹ ಘಟನೆ ನಡೆದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ? ಹಲವು ಮುಸ್ಲಿಂ ಸಂಘಟನೆಗಳು ಈ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗದ್ದಲ ಎಬ್ಬಿಸುತ್ತಿದ್ದವು. ನಮಾಜ್ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಭದ್ರತಾ ಪಡೆಗಳು ಕೊಂದಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿತ್ತು. ಆದರೆ ಪಾಕಿಸ್ಥಾನಿ ರೇಂಜರ್‌ಗಳು ಮಾಡಿದ ಈ ಕೃತ್ಯಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತದ ಮುಸ್ಲಿಂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಮೌನವಾಗಿ ಕುಳಿತಿದ್ದಾರೆ ಎಂದು ಕೆವರು ಪ್ರತಿಕ್ರಿಯಿಸಿದ್ದಾರೆ.