ತಿರುಪತಿ: ವೆಂಕಟೇಶ್ವರ ಸ್ವಾಮಿಯ ಸನ್ನಿದಾನವಾದ ತಿರುಮಲ ತಿರುಪತಿ ಕ್ಷೇತ್ರ ಬಹಳ ಪ್ರಸಿದ್ಧವಾದ ಹಿಂದೂ ದೇಗುಲವಾಗಿದೆ.. ಭಾರತದ ಶ್ರೀಮಂತ ದೇವಸ್ಥಾನವಾಗಿರುವ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಿತ್ಯ ಲಕ್ಷಾಂತರ ಭಕ್ತರು ದೇಶ, ವಿದೇಶದಿಂದ ಬರುತ್ತಾರೆ. ಭಕ್ತರಿಗೆ ಅನುಕೂಲವಾಗಲೆಂದು ತಿರುಪತಿ ವೆಂಕಟರಮಣ ಸನ್ನಿದಾನದಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ. ಆದರೂ ಸಹ ಈ ಕ್ಷೇತ್ರದಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದಾರೆ. ಈ ಘಟನೆ ನಡೆದ ಬಳಿಕ ಸಾಕಷ್ಟು ಚರ್ಚೆಗೆ ಒಳಗಾಗಿದೆ,.
ತಿರುಮಲ ದೇವರ ದರ್ಶನಕ್ಕೆ ಬಂದ ತಮಿಳುನಾಡಿನ ಭಕ್ತನೊಬ್ಬ ದೇವರ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾನೆ. ಸಿಸಿ ಕ್ಯಾಮರಾ ಮೇಲೆ ನಿಗಾ ಇಟ್ಟಿದ್ದ ಆಡಳಿತ ಸಿಬ್ಬಂದಿಯಾದ ಜ್ಞಾನೇಂದ್ರ ಎಂಬುವವರು ಇದನ್ನು ಪತ್ತೆ ಹಚ್ಚಿ ವಿಜಿಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದರಿಂದ ಭಕ್ತನ ಸೋಗಿನಲ್ಲಿ ಬಂದಿದ್ದ ಕಳ್ಳನ ಪ್ರಕರಣ ಬಯಲಾಗಿದೆ. ಹುಂಡಿ ಕಳ್ಳತನ ಮಾಡಿದ ಭಕ್ತನನ್ನು ಹಿಡಿದು ಆತನಿಂದ 15 ಸಾವಿರ ರೂ. ವಸೂಲಿ ಮಾಡಲಾಗಿದೆ.
ಆತ ತಮಿಳುನಾಡು ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದ್ದು ನಂತರ ವಿಜಿಲೆನ್ಸ್ ಅಧಿಕಾರಿಗಳು ತಿರುಮಲ ಒನ್ ಟೌನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಇದೇ ತಿಂಗಳ 23ರಂದು ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ದೇವಸ್ಥಾನದಲ್ಲಿದ್ದ ಕಬ್ಬಿಣದ ಹುಂಡಿಯಲ್ಲಿದ್ದ ಹಣವನ್ನು ತಮಿಳುನಾಡಿನ ವೇಣುಲಿಂಗ ಎಂಬಾತ ಕದ್ದು ಪರಾರಿಯಾಗಿದ್ದ. ಇದನ್ನು ಸಿಸಿಟಿವಿಯಲ್ಲಿ ನೋಡಿದ ದೃಶ್ಯಾವಳಿಗಳ ಆಧಾರದ ಮೇಲೆ ಭದ್ರತಾ ಸಿಬ್ಬಂದಿ ಈ ಕಳ್ಳತನವನ್ನು ಗುರುತಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.